Monday, July 4, 2022
spot_imgspot_img
spot_imgspot_img

ವಿಠ್ಠಲ್ ಜೇಸಿಸ್ ಶಾಲೆಯಲ್ಲಿ 620ಕ್ಕಿಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಚಿನ್ನದ ಪದಕ ವಿಜೇತ ವಿದ್ಯಾರ್ಥಿಗೆ ಸನ್ಮಾನ

- Advertisement -
- Advertisement -

ಸತತ 19ನೇ ಬಾರಿ ಶೇಕಡಾ 100 ಫಲಿತಾಂಶ ದಾಖಲಿಸಿದ ವಿಟ್ಲದ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 620 ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಹಾಗೇ ವೈಟ್‌ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಪಡೆದ ಇಶಾನ್ ಕಾರ್ಯಪ್ಪ ಸೇರಾಜೆ ಅವರನ್ನೂ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎಲ್.ಎನ್ ಕೂಡೂರು, ಉಪಾಧ್ಯಕ್ಷ ಶ್ರೀಧರ್ ಶೆಟ್ಟಿ, ಖಜಾಂಚಿ ಪ್ರಭಾಕರ್‍ ಶೆಟ್ಟಿ, ಕಾರ್ಯದರ್ಶಿ ಮೋಹನ್ ಎ, ಜತೆ ಕಾರ್ಯದರ್ಶಿ ಶ್ರೀ ಪ್ರಕಾಶ್, ನಿರ್ದೇಶಕರುಗಳಾದ ಹಸನ್ ವಿಟ್ಲ, ವಿಜಯ ಪಾಯಿಸ್, ಆಡಳಿತಾಧಿಕಾರಿ ರಾಧಕೃಷ್ಣ ಎ, ಪ್ರಾಂಶುಪಾಲ ಜಯರಾಮ್ ರೈ, ಶಿಕ್ಷಕ ಕೃಷ್ಣ ಭಟ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಮೇಧನಾಯಕ್, ಹರ್ಷ ಎಸ್, ಧನ್ಯಶ್ರೀ, ಚರೀಷ್ಮಾ ಆರ್ ರೈ, ಕೈಝೇನ್ ಎಸ್‌ ಪೋಷಕರಾದ ಸೂರ್‍ಯನಾರಾಯಣ ಎನ್ ಕೆ, ಮಮತಾ, ಜಯಶ್ರೀ, ಶಶಿಧರ ಭಂಡಾರಿ, ಪ್ರಕಾಶ್ ನಾಯಕ್ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕಾರ್ಯಕ್ರಮದ ನಿರೂಪಣೆ, ಧನ್ಯವಾದವನ್ನು ಎಮಿಲ್ಡಾ ಸೀಮಾ ಸಲ್ಡಾನ ನೆರವೇರಿಸಿದರು. ಪ್ರಾಂಶುಪಾಲರಾದ ಜಯರಾಮ್ ರೈ ಧನ್ಯವಾದಗೈದರು.

- Advertisement -

Related news

error: Content is protected !!