Sunday, June 21, 2026
spot_imgspot_img
spot_imgspot_img

ವಿಟ್ಲ: (ಜುಲೈ.27) ಬಂಟರ ಸಂಘ (ರಿ.) ಕೇಪು ನೂತನ ಸಮಿತಿಯ ಪದಗ್ರಹಣ ಸಮಾರಂಭ

- Advertisement -
- Advertisement -

ವಿಟ್ಲ: ಬಂಟರ ಸಂಘ (ರಿ.) ಕೇಪು ನೂತನ ಸಮಿತಿಯ ಪದಗ್ರಹಣ ಸಮಾರಂಭವು ಜುಲೈ 27-07-2025ನೇ ಆದಿತ್ಯವಾರ ವಿಟ್ಲ ಗಾರ್ಡನ್‌ ಆಡಿಟೋರಿಯಂ ಕರವೀರ-ಮೈರ ಇಲ್ಲಿ ನಡೆಯಲಿದೆ.

ಬೆಳಿಗ್ಗೆ 9:00ಕ್ಕೆ ಉಪಹಾರ ನಡೆದು ಬಳಿಕ 9:30ರಿಂದ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ 10:30 ರಿಂದ ಸಭಾಕಾರ್ಯಕ್ರಮ ನಡೆದು ಬಳಿಕ 11:30 ರಿಂದ ಪ್ರಖ್ಯಾತ ಯುವ ಭಾಗವತ ಪ್ರಖ್ಯಾತ್‌ ಶೆಟ್ಟಿ ಅಳಿಕೆ ಇವರ ಸಾರಥ್ಯದಲ್ಲಿ “ಯಕ್ಷ-ರಸ ಹಾಸ್ಯ ಕಾರ್ಯಕ್ರಮ” ನಡೆಯಲಿದೆ. ಮಧ್ಯಾಹ್ನ1:30ರಿಂದ ಸಹ ಬೋಜನೆ ನಡೆಯಲಿದೆ.

ಬೆಳಿಗ್ಗೆ 10:30ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೇಪು ಬಂಟರ ಸಂಘ ಅಧ್ಯಕ್ಷ ಜಗಜೀವನ್‌ ರಾಮ್‌ ಶೆಟ್ಟಿ ಬೇಡೆಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಸಿ ರೋಡ್‌ ನ್ಯಾಯವಾದಿ ಜಯರಾಮ್‌ ರೈ ಉಳಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಕೇಪು ಪ್ರಾಧಾನ ಗುರಿಕಾರ ಶ್ರೀನಿವಾಸ ರೈ ಕುಂಡಕೋಳಿ ಇವರನ್ನು ಸನ್ಮಾನಿಸಲಾಗುವುದು.

ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘ ನಿರ್ದೇಶಕ ಭಾಸ್ಕರ ಶೆಟ್ಟಿ ವಿಟ್ಲ, ವಿಟ್ಲ ವಲಯ ಬಂಟರ ಸಂಘ ಗೌರವಾಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ವಿಟ್ಲ ವಲಯ ಬಂಟರ ಸಂಘ ಅಧ್ಯಕ್ಷ ರಾಜೀವ ಭಂಡಾರಿ ಕುಂಡಕೋಳಿ, ಕೇಪು ಬಂಟರ ಸಂಘ ಗೌರವಾಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ- ಪಡಿಬಾಗಿಲು, ಕೇಪು ಬಂಟರ ಸಂಘ ನಿಯೋಜಿತ ಅಧ್ಯಕ್ಷ ತಾರಾನಾಥ ಆಳ್ವ ಕುಕ್ಕೆಬೆಟ್ಟು ಅತಿಥಿಗಳಾಗಿ ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಎಸ್‌.ಎಸ್‌.ಎಲ್‌.ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

- Advertisement -

Related news

error: Content is protected !!