Saturday, June 6, 2026
spot_imgspot_img
spot_imgspot_img

ವಿಟ್ಲ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.)ವಿಟ್ಲ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಬಗ್ಗೆ ಪತ್ರಿಕಾಗೋಷ್ಠಿ

- Advertisement -
- Advertisement -

ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ವಿಟ್ಲ ಇದರ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯ ಬಗ್ಗೆ ಸಂಘದ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ ಯನ್‌ ಮಾತನಾಡಿ’ ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ವಿಟ್ಲ ಇದರ 2024-25ನೇ ಸಾಲಿನ ವಾರ್ಷಿಕ ವರದಿ ಮಹಾಸಭೆಯು ಆ.31-8-2025 ನೇ ಆದಿತ್ಯವಾರದಂದು ಬೆಳಗ್ಗೆ 11 ಗಂಟೆಗೆ ವಿಠಲ ಪದವಿಪೂರ್ವ ಕಾಲೇಜಿನ ’ಸುವರ್ಣ ರಂಗ ಮಂದಿರದಲ್ಲಿ ನಡೆಯಲಿದೆ. ಸಭೆಯಲ್ಲಿ 2024-25ನೇ ವರ್ಷದ ವರದಿ ವಾಚನ, ಕಳೆದ ವರ್ಷದ ಮಹಾಸಭೆಯ ನಡವಳಿಕೆಗಳನ್ನು ದಾಖಲಿಸುವುದು, 2024-25ನೇ ಸಾಲಿನ ಜಮಾ-ಖರ್ಚು, ವ್ಯಾಪಾರ, ಲಾಭ-ನಷ್ಟ ಮತ್ತು ಆಸ್ತಿ ಜವಬ್ದಾರಿ ತಖ್ತೆಗಳ ಮಂಜೂರಾತಿ, 2024-25ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯ ಮಂಜೂರಾತಿ, 2024-25ನೇಸಾಲಿನ ಅಂದಾಜು ಬಜೆಟ್‌‌ಗಿಂತ ಮಿಕ್ಕಿ ಆದ ಖರ್ಚಿನ ಮಂಜೂರಾತಿ, 2024-25ನೇ ವರ್ಷದ ಬಾಬ್ತು ತಯಾರಿಸಲಾದ ಅಂದಾಜು ಆಯ-ವ್ಯಯ ಪಟ್ಟಿಯ ಮಂಜೂರಾತಿ, 2024-25ನೇ ಸಾಲಿನ ವರ್ಷದ ಲಾಭಾಂಶ ವಿಂಗಡಣೆ, ಸಂಯೋಜಿತ ಸಂಸ್ಥೆಗಳಿಗೆ ಪ್ರತಿನಿಧಿಗಳನ್ನು ಆರಿಸುವುದು, 2024-25ನೇ ಸಾಲಿನ ಲೆಕ್ಕ ಪರಿಶೋಧಕ ಆಯ್ಕೆ, ಮುಂತಾದ ವಿಚಾರಗಳ ಬಗ್ಗೆ ಸಭೆ ನಡೆಯಲಿದೆ.

ಅದಲ್ಲದೆ, ಸಂಘವು 2024-25 ನೇ ಸಾಲಿನಲ್ಲಿ 133 ಮಂದಿ ಸದಸ್ಯರಾಗಿ ಸೇರಿದ್ದು ರೂ. 39,44,250/- ಪಾಲು ಬಂಡವಾಳ ಜಮೆಯಾಗಿದೆ. 38 ಮಂದಿ ಸದಸ್ಯರು ಬಿಡುಗಡೆಯಾಗಿದ್ದು ರೂ. 16,69,780/- ಪಾಲುಬಂಡವಾಳ ಮರುಪಾವತಿ ಮಾಡಿದೆ. ದಿನಾಂಕ 31-03-2025ಕ್ಕೆ ಇದ್ದಂತೆ 5430 “ಎ” ತರಗತಿ ಸದಸ್ಯರು ಇದ್ದು ರೂ.3,93,33,230/-ಪಾಲು ಬಂಡವಾಳ ಹೊಂದಿದೆ. ಸಂಘದ ಒಟ್ಟು ಠೇವಣಾತಿ ಮೊತ್ತವು ದಿನಾಂಕ 31-03-2024ಕ್ಕೆ ರೂ. 31,84,86,027.73 ಇದ್ದು ದಿನಾಂಕ 31-03-2025ಕ್ಕೆ ರೂ. 36,07,97,122.26 ಜನ ಆಗಿರುತ್ತದೆ. ವರದಿ ವರ್ಷದಲ್ಲಿ 13.29 % ಠೇವಣಿ ಅಭಿವೃದ್ಧಿಯಾಗಿರುತ್ತದೆ. 2024-25ನೇ ಸಾಲಿನಲ್ಲಿ ಸಂಘವು ರೂ. 213.18 ಕೋಟಿ ವ್ಯವಹಾರ ಮಾಡಿ ಎಲ್ಲಾ ಖರ್ಚುಗಳನ್ನು ಕಳೆದು ರೂ. 1,38,10,775.77 ಲಾಭಗಳಿಸಿದ್ದು ವರದಿ ಸಾಲಿನಲ್ಲಿ ಸಂಘವನ್ನು “ಎ” ತರಗತಿಯಲ್ಲಿ ವರ್ಗೀಕರಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ ಯನ್‌, ಉಪಾಧ್ಯಕ್ಷೆ ಮಂಜುಳಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್ವರ ಬಿ, ನಿರ್ದೇಶಕರುಗಳಾದ ಮಹಾಬಲೇಶ್ವರ ಭಟ್‌ ಎ, ಉದಯ ಕುಮಾರ್‌ ಯನ್‌, ಸದಾನಂದ ಗೌಡ ಸೇರಾಜೆ, ಮೋಹನ ದಾಸ್‌ ಉಕ್ಕುಡ, ರಾಘವೇಂದ್ರ ಪೈ ಎ, ದಿನೇಶ್ ಕೆ, ಸಂಧ್ಯಾ ಮೋಹನ, ವಾಸು ಸಿ ಹೆಚ್‌, ಹರೀಶ್‌ ನಾಯ್ಕ, ತೀರ್ಥರಾಮ, ಯೋಗೀಶ್‌ ಹೆಚ್‌ ಉಪಸ್ಥಿತರಿದ್ದರು.

ವಿಶೇಷ ಸೂಚನೆ:
*2024-25ನೇ ಸಾಲಿನ ವಾರ್ಷಿಕ ವರದಿಯನ್ನು ಸಂಘದ ಕಛೇರಿಯಿಂದ ಮಾನ್ಯ ಸದಸ್ಯರು ಪಡೆದುಕೊಳ್ಳಬಹುದು.
*ಸಂಘದ ಸದಸ್ಯ ಭಾಂಧವರಲ್ಲಿ ವಿನಂತಿ ಶಾಲಾ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ (ಸಂಘದ ಸದಸ್ಯ ಮಕ್ಕಳಿಗೆ) 10ನೇ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಶೇಕಡಾ 80%ಗಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ. (ಕಡ್ಡಾಯವಾಗಿ ವಿದ್ಯಾರ್ಥಿಗಳೇ ಹಾಜರಿರಬೇಕು.)

- Advertisement -

Related news

error: Content is protected !!