- Advertisement -
- Advertisement -


ವಿಟ್ಲ: Spyss ಯೋಗ ಶಿಕ್ಷಣ ಕೇಂದ್ರ (ರಿ.) ತುಮಕೂರು ನೇತ್ರಾವತಿ ವಲಯ ಮಂಗಳೂರು ವಿಟ್ಲ ಶ್ರೀರಾಮ ಮಂದಿರ ಯೋಗ ಶಾಖೆ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಿಂದ ಸ್ಥಳಾಂತರಗೊಂಡು ಶ್ರೀರಾಮ ಮಂದಿರ ಶಾಖೆಗೆ ಮರುನಾಮಕಗೊಂಡು ಆರಂಭಗೊಂಡಿತು.

ಜಿಲ್ಲಾ ಸಹ ಸಂಚಾಲಕಿ ಮಾಧುರಿ ದೀಪ ಪ್ರಜ್ವಲನದೊಂದಿಗೆ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಸಂಚಾಲಕ ಗೋಪಾಲಕೃಷ್ಣ, ಶಿಕ್ಷಕ ಮಂಜುನಾಥ್, ಅಮರನಾಥ್, ಕುಶಲಪ್ಪ ಉಪಸ್ಥಿತರಿದ್ದರು.
ಉಚಿತವಾಗಿ ಯೋಗ ತರಬೇತಿ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 4:50 ರಿಂದ 6:30ರವರೆಗೆ ನಡೆಯಲಿದೆ. ಮಕ್ಕಳಿಂದ ಎಲ್ಲಾ ವಯಸ್ಸಿನವರಿಗೂ ತರಗತಿಗೆ ಸೇರಿಕೊಳ್ಳುವ ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೂಡಲೇ ಸಂಪರ್ಕಿಸಿ: 9845747179
- Advertisement -