- Advertisement -
- Advertisement -





ವಿಟ್ಲ: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ ಶೇಕಡಾ 96% ಫಲಿತಾಂಶ ಪಡೆದುಕೊಂಡಿದೆ.
2025ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯ ಒಟ್ಟು 98 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 38 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 94 ವಿದ್ಯಾರ್ಥಿಗಳು ಉತ್ತೀರ್ಣ, 49 ಪ್ರಥಮ ಶ್ರೇಣಿ ಹಾಗೂ 07 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶೇಕಡಾ 96% ಫಲಿತಾಂಶ ಪಡೆದುಕೊಂಡಿದೆ.
ಆದಿತ್ಯ ಡಿ ಎ 618, ಬ್ರಹ್ಮರಿ ಎ ಪೂಜಾರಿ 617, ದೀಕ್ಷಾ 614, ಶಮಿತ ಶೆಟ್ಟಿ 613, ಹರ್ಷ ಎಂ 612, ಶೈಲೋಚನ್ ಎ ಎಮ್.611, ಸ್ವೀಡಲ್ ಲಿಸಾ ಮಸ್ಕರೇನ್ಹಸ್ 610, ಜಾಹ್ನವಿ 606, ಆದಿ ಆರ್ ಶಾಸ್ತ್ರಿ 606, ಸೈಫುಲ್ ಅಜ್ಮಾನ್ 603 ಅಂಕಗಳನ್ನು ಗಳಿಸಿ ವಿಶಿಷ್ಟ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ.
- Advertisement -








