



ಕೇಪು: ವಿಟ್ಲ ವಲಯ ಮಟ್ಟದ ಪ್ರೌಢ ಶಾಲಾ ಬಾಲಕ/ಬಾಲಕಿಯರ ವಾಲಿಬಾಲ್ ಪಂದ್ಯಾಟವು 13.08.2025ರಂದು ಸರಕಾರಿ ಪ್ರೌಢ ಶಾಲೆ ಕಲ್ಲಂಗಳ ಕೇಪು ಇಲ್ಲಿ ನಡೆಯಿತು.
ಗ್ರಾ.ಪಂ ಅಧ್ಯಕ್ಷ ರಾಘವ ಮಣಿಯಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಂಗಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರಕಾಶ್ ರೈ ಕಲ್ಲಂಗಳ, ಗ್ರಾ ಪಂ ಸದಸ್ಯ ಬಾಲಕೃಷ್ಣ ಬೇಂಗ್ರೋಡಿ, ಜಗಜೀವನ್‌ರಾಮ್ ಶೆಟ್ಟಿ, ಪುರುಷೋತ್ತಮ ಗೌಡ, ಎಸ್.ಡಿಎಂ.ಸಿ ಅಧ್ಯಕ್ಷೆ ಮೋಹಿನಿ, ಗಿರಿಜಾ ಎನ್, ಮಾಜಿ ಎಸ್.ಡಿ.ಎಂಸಿ ಅಧ್ಯಕ್ಷ ಅಬ್ದುಲ್ ಕರೀಂ, ಎಸ್.ಡಿ.ಎಂ.ಸಿ ಸದಸ್ಯ ಗೋವಿಂದರಾಯ್ ಶೆಣೈ , ಬಾಲಕೃಷ್ಣ ಕಾರಂತರು, ನಾರಾಯಣ ಪುರುಷ, ನರಸಿಂಹಬಲ್ಲಾಳ್ ಕಾರ್ಯಕ್ರಮದಲ್ಲಿ ಉಪಸ್ಥತರಿದ್ದರು.

ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು. ಮುಖ್ಯ ಶಿಕ್ಷಕಿ ಮಾಲತಿ ಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪೂರ್ಣಿಮಾ ಎಸ್ ಕಮ್ಮಾಜೆ ಧನ್ಯವಾದಗೈದರು. ರಮೇಶ ಡಿ ಕಾಯಕ್ರಮ ನಿರೂಪಿಸಿದರು.
ಸಂಜೆ ಸಮಾರೋಪ ಸಮಾರಂಭದಲ್ಲಿ ವೀಜೆತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಅವುಗಳ ಪಟ್ಟಿ ಈ ಕೆಳಗಿಂತಿವೆ
ಪ್ರಥಮ ಬಾಲಕರ ವಿಭಾಗ: ಆರ್‌ಎಂಎಸ್ಎ ವಿಟ್ಲ
ಪ್ರಥಮ ಬಾಲಕಿಯರ ವಿಭಾಗ: ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ ವಿಟ್ಲ
ದ್ವಿತೀಯ ಬಹುಮಾನ ಬಾಲಕರ ವಿಭಾಗ: ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ ವಿಟ್ಲ
ದ್ವಿತೀಯ ಬಹುಮಾನ ಬಾಲಕಿಯರ ವಿಭಾಗ: ಸೂರ್ಯ ಪ್ರೌಢ ಶಾಲೆ ಸೂರ್ಯ
ಮುಖ್ಯ ಶಿಕ್ಷಕಿ ಮಾಲತಿ ಕೆ ಸ್ವಾಗತಿಸಿ, ಮಾಲಿನಿ ಕೆ ಎನ್ ಧನ್ಯವಾದಗೈದರು. ರಮೇಶ ಡಿ ಕಾಯಕ್ರಮ ನಿರೂಪಿಸಿದರು.








