- Advertisement -
- Advertisement -
ಅಧ್ಯಕ್ಷರಾಗಿ ಪುರಂದರ ಅಂಚನ್, ಉಪಾಧ್ಯಕ್ಷರಾಗಿ ನಮಿತಾ ಬೊದ್ದೋಣಿ ಆಯ್ಕೆ



ಬೊಳಂತಿಮೊಗರು: ಪಿ.ಎಂ. ಶ್ರೀ ಕರ್ನಾಟಕ ಪಬ್ಲಿಕ್ ಶಾಲೆ, ಬೊಳಂತಿಮೊಗರು ಇದರ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಪುರಂದರ ಅಂಚನ್ ಅವರು ಸತತಮೂರನೇ ಬಾರಿಗೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸಮಿತಿಯ ಉಪಾಧ್ಯಕ್ಷರಾಗಿ ನಮಿತಾ ಬೊದ್ದೋಣಿ ಆಯ್ಕೆಯಾದರು.
ಆಯ್ಕೆ ಪ್ರಕ್ರಿಯೆಯು ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು ಅವರ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೌನ್ಸಿಲರ್ ಅಬ್ದುಲ್ ರಹಿಮಾನ್, ಜಗದೀಶಚಂದ್ರ ಗೌಡ, ವಿಶ್ವನಾಥ್ ನಾಯ್ತೋಟ್ ಹಾಗೂ ಶಾಲೆಯ ಮುಖ್ಯ ಶಿಕ್ಷಕ ಇಸ್ಮಾಯಿಲ್ ಉಪಸ್ಥಿತರಿದ್ದರು.
- Advertisement -








