Wednesday, July 22, 2026
spot_imgspot_img
spot_imgspot_img

ವಿಟ್ಲ: ಬಿಜೆಪಿ OBC ಮೋರ್ಚಾದ ವಿಟ್ಲ ಮಹಾಶಕ್ತಿ ಕೇಂದ್ರದ ಸಭೆ

- Advertisement -
- Advertisement -

ವಿಟ್ಲ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವಿಟ್ಲ ಮಹಾಶಕ್ತಿ ಕೇಂದ್ರದ ಸಭೆಯು ವಿಟ್ಲ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಕ್ಷೇತ್ರ OBC ಮೋರ್ಚಾದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು ಅವರು ಸಂಘಟನಾತ್ಮಕವಾಗಿ ಸಲಹೆ ಸೂಚನೆ ನೀಡಿದರು. ಬಿಜೆಪಿ ಮಹಾಶಕ್ತಿ ಕ್ಷೇತ್ರದ ಅಧ್ಯಕ್ಷ ಅರುಣ್ ವಿಟ್ಲ ಅಧ್ಯಕ್ಷತೆ ವಹಿಸಿದ್ದರು.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಶ್ರೀಕೃಷ್ಣ ವಿಟ್ಲ ಇವರು ಕಲ್ಯಾಣ್ ಸಿಂಗ್ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಬಳಿಕ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು. ಕಡಬ ತಾಲೂಕು ಉದ್ಯೋಗಿ ಮಿಲನ್ ಪ್ರಮುಖ್ ಆದರ್ಶ ಶೆಟ್ಟಿ ಇವರು ರಕ್ಷಾಬಂಧನದ ಸಂದೇಶ ನೀಡಿದರು. OBC ಮೋರ್ಚಾದ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪ್ರಭು, ಮಹಾಶಕ್ತಿ ಕೇಂದ್ರದ OBC ಮೋರ್ಚಾ ಸಂಚಾಲಕ ಲೋಕೇಶ್ ಉಪಸ್ಥಿತರಿದ್ದರು. ಮಂಡಲ ಸಮಿತಿ ಸದಸ್ಯ ರಾಜೇಶ್ ಬೊಬ್ಬೆಕೇರಿ ಸ್ವಾಗತಿಸಿದರು. ಮಂಡಲ ಉಪಾಧ್ಯಕ್ಷ ಉದಯ ಕುಮಾರ್ ಆಲಂಗಾರು ವಂದಿಸಿದರು.

- Advertisement -

Related news

error: Content is protected !!