Sunday, April 28, 2024
spot_imgspot_img
spot_imgspot_img

ವಿಟ್ಲ: ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಶಿಲಾನ್ಯಾಸ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ(ರಿ) ಕುಂಡಡ್ಕ- ಬೇರಿಕೆ ಇದರ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 9.00ಕ್ಕೆ ನಿಧಿಕುಂಭ ಸಮರ್ಪಣೆ, ಮಂದಿರದ ಶಿಲಾನ್ಯಾಸ ನಡೆದ ಬಳಿಕ ಸಭಾಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ರಿ. ಕುಂಡಡ್ಕ, ಬೇರಿಕೆ ಇದರ ಅಧ್ಯಕ್ಷ ಹರೀಶ್ ಪೂಜಾರಿ ಮರುವಾಳ ವಹಿಸಿದ್ದರು. ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಕಣಿಯೂರಿನ ಮಹಾಬಲ ಸ್ವಾಮೀಜಿ ಹಾಗೂ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರ ಕುಕ್ಕಾಜೆಯ ಕೃಷ್ಣ ಗುರೂಜಿ ಮಾತನಾಡಿ ಆರ್ಶೀವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಡಾ. ರಾಜಾರಾಮ್‌ ಕೆ.ಬಿ, ಉದ್ಯಮಿ ಪುರುಷೋತ್ತಮ ಕಾರಾಜೆ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ರಿ., ಗಾನದಪಡ್ಪು ಬಿ.ಸಿ.ರೋಡು ಇದರ ಅಧ್ಯಕ್ಷ ಬಿ. ಸಂಜೀವ ಪೂಜಾರಿ, ‘ಗುರುಕೃಪಾ’, ಅಕ್ಷಯ ಕಾಲೇಜು ಪುತ್ತೂರಿನ ಅಧ್ಯಕ್ಷರು ಜಯಂತ ನಡುಬೈಲು,ಲಯನ್ಸ್ ಜಿಲ್ಲೆ 317-ಡಿ ಪೂರ್ವ ರಾಜ್ಯಪಾಲರು ಲ|ಡಾ. ಗೀತಾ ಪ್ರಕಾಶ್‌, ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಸಂಜೀವ ಪೂಜಾರಿ,ಉದ್ಯಮಿ ಶ್ರೀನಿವಾಸ ಪೂಜಾರಿ ಶ್ರೀ ಗುರುಜ್ಯೋತಿ ಶಾಮಿಯಾನ ಮೆಲ್ಕಾರ್‌, ಪ್ರಗತಿಪರ ಕೃಷಿಕ ಸುಧಾಕರ ಪೂಜಾರಿ ಕೇಪು ಭಾಗವಹಿಸಿದ್ದರು.

ವೇದಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಗೌರವಾಧ್ಯಕ್ಷ ದೇಜಪ್ಪ ಪೂಜಾರಿ ನಿಡ್ಯ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷೆ ಸುಮಲತಾ ಅಶೋಕ್‌, ಗೌರವಾಧ್ಯಕ್ಷೆ ಸುಮಾ ದೇಜಪ್ಪ ಪೂಜಾರಿ ನಿಡ್ಯ, ಮಂದಿರ ನಿರ್ಮಾಣಕ್ಕೆ 20cents ಜಾಗ ಉಚಿತವಾಗಿ ನೀಡಿದ ಮಹಿಳಾ ಘಟಕದ ಕೋಶಾಧಿಕಾರಿ ರೇಖಾ ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.

ನಳಿನಿ ರಾಜೇಶ್ ಹಲಸಿನಕಟ್ಟೆ ಪ್ರಾರ್ಥಿಸಿ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಕಟ್ಟಡ ನಿರ್ಮಾಣ ಸಮಿತಿ ಕಾರ್ಯದರ್ಶಿ ಮೋಹನ್‌ ಗುಜ್ಜಿನಡ್ಕ ಸ್ವಾಗತಿಸಿದರು. ಸಭಾಭವನದ ನಿರ್ಮಾಣ ಸಮಿತಿ ಉಪಾಧ್ಯಕ್ಷ ಎಲ್ಯನ್ಣ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ಚೈತನ್ಯ ಕುಂಡಡ್ಕ ಪಾದೆ ಇವರು ಧನ್ಯವಾದವಿತ್ತರು.

- Advertisement -

Related news

error: Content is protected !!