Wednesday, May 22, 2024
spot_imgspot_img
spot_imgspot_img

ಹೊಳೆಗೆ ನಿರ್ಮಿಸಲಾದ ಅಣೆಕಟ್ಟಿನಿಂದ ನೀರು ಸೋರಿಕೆ

- Advertisement -G L Acharya panikkar
- Advertisement -

ತುಂಬಿದ ಹೊಳೆ ಬತ್ತಿ ಹೋಗುವ ಬಗ್ಗೆ ಯಾವ ಸಂಶಯವೂ ಇಲ್ಲ: ಸ್ಥಳೀಯರ ಆಕ್ರೋಶ

ವಿಟ್ಲ: ವಿಟ್ಲದ ಕಸಬಾ ಗ್ರಾಮ ದೇವಸ್ಯ ಎಂಬಲ್ಲಿನ ಹೊಳೆಯಲ್ಲಿ ನಿರ್ಮಿಸಲಾದ ಅಣೆಕಟ್ಟಿನಿಂದ ನೀರು ಸೋರಿಕೆಯಾಗುತ್ತಿದ್ದು, ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಲಕಟ್ಟ ಸಂಕದಿಂದ ಕೊಲ್ಯದ ಮೂಲಕ ದೇವಸ್ಯ ಹೊಳೆಯಲ್ಲಿ ಸಂಗ್ರಹವಾಗುವ ನೀರಿಗೆ ಅಣೆಕಟ್ಟು ಕಟ್ಟಲಾಗಿದ್ದು, ಘನ ನೀರಾವರಿ ಯೋಜನೆಯಿಂದ ನಿರ್ಮಿಸಲಾದ ಈ ಅಣೆಕಟ್ಟಿಗೆ ಅಳವಡಿಸಲಾದ ಕಳಪೆ ಮಟ್ಟದ ಶೀಟ್‌ನಿಂದಾಗಿ ವಿಪರೀತ ನೀರು ಸೋರಿಕೆಯಾಗುತ್ತಿದೆ.

ವಿಟ್ಲ ಪರಿಸರದ ಸುಮಾರು 300 ಮನೆಗಳಿಗೆ, ಕೃಷಿ ಹಾಗೂ ದೈನಂದಿನ ಚಟಿವಟಿಕೆಗಳಿಗೆ ಈ ನೀರು ಉಪಯೋಗವಾಗುತ್ತಿದ್ದು, ಈ ರೀತಿ ನೀರು ಸೋರಿಕೆಯಾದರೆ ತುಂಬಿದ ಹೊಳೆಯು ಬತ್ತಿ ಹೋಗುವ ಸನ್ನಿವೇಶ ಎದುರಾಗಿಬಹುದು. ಇದರಿಂದಾಗಿ ಮತ್ತೆ ಈ ಭಾಗದ ಕೃಷಿಕರಿಗೆ ಹಾಗೂ ಕುಡಿಯುವ ನೀರಿಗೆ ಅಭಾವ ಉಂಟಾಗಬಹುದು. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಆದಷ್ಟು ಬೇಗನೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!