Sunday, May 5, 2024
spot_imgspot_img
spot_imgspot_img

ವಿಟ್ಲ: ದಕ್ಷಿಣ ಕೊರಿಯಾ ವಿಶ್ವ ಜಾಂಬೂರಿಯಲ್ಲಿ ಭಾಗವಹಿಸಲಿರುವ ವಿಠ್ಠಲ್ ಜೇಸೀಸ್ ಶಾಲಾ ವಿದ್ಯಾರ್ಥಿಗಳು

- Advertisement -G L Acharya panikkar
- Advertisement -

ವಿಟ್ಲ: ವಿವಿಧ ದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಆಗಸ್ಟ್ 1ರಿಂದ 12ರ ವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಸ್ಕೌಟ್ & ಗೈಡ್ ವಿಶ್ವ ಜಾಂಬೂರಿ ಉತ್ಸವಕ್ಕೆ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ

ಸವಿತಾ ಕೆ ಹಾಗೂ ಸತೀಶ ಕುಮಾರ್ ಎ ರವರ ಪುತ್ರಿ ಸೃಜನಾ ರೈ ಎ 10 ನೇ ತರಗತಿ ಮತ್ತು ಮಮತಾ ಎಸ್ ಹಾಗೂ ಎಂ ಶ್ರೀನಿವಾಸ್ ಆಚಾರ್ ರವರ ಪುತ್ರ ಅನಿಶ್ ಕೃಷ್ಣ ಆಚಾರ್ 10 ನೇ ತರಗತಿ ಆಯ್ಕೆಗೊಂಡ ವಿದ್ಯಾರ್ಥಿಗಳು.

ಜುಲೈ 31ರಂದು ದಕ್ಷಿಣ ಕನ್ನಡ ತಂಡದ 46 ವಿದ್ಯಾರ್ಥಿಗಳು ಮತ್ತು 5 ಶಿಕ್ಷಕರು ಮಂಗಳೂರಿನಿಂದ ಬೆಂಗಳೂರು ಮತ್ತು ಹಾಂಕಾಂಗ್ ಮೂಲಕ ದಕ್ಷಿಣ ಕೊರಿಯಾಕ್ಕೆ ತೆರಳಿ, ಭಾರತವನ್ನು ಪ್ರತಿನಿಧಿಸಲಿದ್ದಾರೆ. ಶಾಲಾ ಸ್ಕೌಟ್ & ಗೈಡ್ ತರಬೇತುದಾರರಾದ ಜಯಶ್ರೀ ಯವರು ತರಬೇತುಗೊಳಿಸಿದ್ದಾರೆ ಎಂದು ಶಾಲಾ ಪ್ರಾಂಶುಪಾಲ ಜಯರಾಮ ರೈ ಯವರು ತಿಳಿಸಿದ್ದಾರೆ. ಪ್ರತಿನಿಧಿಸುವ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಶಿಕ್ಷಕ – ಶಿಕ್ಷಕೇತರ ವೃಂದ ಶುಭಹಾರೈಸಿದ್ದಾರೆ.

- Advertisement -

Related news

error: Content is protected !!