- Advertisement -
- Advertisement -

ವಿಟ್ಲ: ದ.ಕ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬಂಟ್ವಾಳ ಮತ್ತು ಸರಕಾರಿ ಪ್ರೌಢಶಾಲೆ(ಆರ್.ಎಂ.ಎಸ್.ಎ) ವಿಟ್ಲ ಇವರ ಸಂಯುಕ್ತ ಆಶ್ರಯದಲ್ಲಿ 17 ವರ್ಷದ ವಯೋಮಿತಿಯೊಳಗಿನ ತಾಲೂಕು ಮಟ್ಟದ ಪ್ರೌಢಶಾಲೆಗಳ 2023-24 ಕಬಡ್ಡಿ ಪಂದ್ಯಾಟವು ಸರಕಾರಿ ಪ್ರೌಢಶಾಲೆ(ಆರ್.ಎಂ.ಎಸ್.ಎ) ವಿಟ್ಲದಲ್ಲಿ ನಡೆಯಿತು.

ಬಾಲಕರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಸರಕಾರಿ ಪ್ರೌಢಶಾಲೆ(ಆರ್.ಎಂ.ಎಸ್.ಎ) ವಿಟ್ಲ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ದ್ವಿತೀಯ ಸ್ಥಾನವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ, ವಗ್ಗ ಪಡೆದುಕೊಂಡಿತ್ತು.

ಬಾಲಕಿಯರ ವಿಭಾಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಗ್ಗ ಪ್ರಥಮ ಸ್ಥಾನ ಪಡೆದುಕೊಂಡು, ಕಲ್ಲಡ್ಕದ ಶ್ರೀರಾಮ ಪ್ರೌಢಶಾಲೆಯ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದುಕೊಂಡರು.
- Advertisement -








