Monday, May 13, 2024
spot_imgspot_img
spot_imgspot_img

ವಿಟ್ಲ : (ಫೆ. 18) ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ

- Advertisement -G L Acharya panikkar
- Advertisement -

ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆ. 18 ರಂದು ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಲಕ್ಷ ಬಿಲ್ವಾರ್ಚನೆ, ಏಕಾದಶ ರುದ್ರಾಭಿಷೇಕ, ರಂಗಪೂಜೆ ಹಾಗೂ ಶ್ರೀ ದೇವರ ಬಲಿ ಉತ್ಸವ ನಡೆಯಲಿದೆ. ರಾತ್ರಿ 12 ನಂತರ ವಿವಿಧ ಭಜನಾ ಮಂಡಳಿಯವರಿಂದ ಭಜನೋತ್ಸವ ಜರಗಲಿದೆ. ಫೆ. 19 ರಂದು ಪ್ರಾತಃಕಾಲ 5 ಗಂಟೆಗೆ ಶ್ರೀ ದೇವರ ಉತ್ಸವ ಬಲಿ, ಕಟ್ಟೆ ಪೂಜೆ, ಬಟ್ಟಲು ಕಾಣಿಕೆ ನಡೆಯಲಿದೆ.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ, ಮಹಾಶಿವರಾತ್ರಿಯ ಪ್ರಯುಕ್ತ ಫೆ.18 ಶನಿವಾರ ಸಂಜೆ ಗಂಟೆ 6.30ರಿಂದ 8.30ರ ವರೆಗೆ ರಾಜೇಶ್ ವಿಟ್ಲ ನಿರ್ದೇಶಕರು ಆರ್.ಕೆ ಯಕ್ಷಗಾನ ಕಲಾಕೇಂದ್ರ ಇವರ ಸಾರಥ್ಯದಲ್ಲಿ ಆರ್.ಕೆ ಯಕ್ಷಗಾನ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ, ನಾಟ್ಯಗುರು ರಕ್ಷಿತ್ ಶೆಟ್ಟಿ ಪಡ್ರೆ ಅವರ ನಿರ್ದೇಶನದಲ್ಲಿ ಹನುಮೋದ್ಭವ ಕನ್ನಡ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ರಾತ್ರಿ ಗಂಟೆ 8.30 ರಿಂದ ಹಿಂದೂ ಯುವ ಸೇನೆ ವಿಟ್ಲ ಅರ್ಪಿಸುವ ಪ್ರಶಸ್ತಿ ವಿಜೇತ ಜೈಮಾತ ಕಲಾ ತಂಡ ಮಂಗಳೂರು ತೆಲಿಕೆದ ಕಲಾವಿದೆರ್ ಅಭಿನಯದ ’ಗುಸು ಗುಸು ಉಂಡುಗೆ’ ಬಾಯಿರ್ದ್‌ ಕೆಬಿಕ್…. ತುಳು ಹಾಸ್ಯಮಯ ನಾಟಕ ನಡೆಯಲಿದೆ.

- Advertisement -

Related news

error: Content is protected !!