Tuesday, July 21, 2026
spot_imgspot_img
spot_imgspot_img

ವಿಟ್ಲ: ಪುಚ್ಚಗುತ್ತು ಶ್ರೀ ಬ್ರಹ್ಮ ಮುಗೇರ ದೈವಗಳು ಶ್ರೀ ಕೊರಗತನಿಯ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ

- Advertisement -
- Advertisement -

ವಿಟ್ಲ:ಕಸಬಾ ಗ್ರಾಮದ ಪುಚ್ಚಗುತ್ತು ಎಂಬಲ್ಲಿ ಮಾರ್ಚ್7 ಶನಿವಾರದಿಂದ ಮಾರ್ಚ್ 8 ಆದಿತ್ಯವಾರ ಹಾಗೂ ಮಾರ್ಚ್ 14 ಶನಿವಾರದಿಂದ ಮಾರ್ಚ್ 15 ಆದಿತ್ಯವಾರದವರೆಗೆ ಶ್ರೀ ಬ್ರಹ್ಮ ಮುಗೇರ ದೈವಗಳು , ಶ್ರೀ ಕೊರಗ ತನಿಯ ದೈವ& ಪರಿವಾರ ದೈವಗಳ ನೇಮೋತ್ಸವವು ನಡೆಯಲಿದೆ.

ಮಾರ್ಚ್ 7 ಶನಿವಾರದಂದು ಮದ್ಯಾಹ್ನ 3ಗಂಟೆಗೆ ಚೌಕಾರು ಮಂತ್ರವಾದಿ ಗುಳಿಗ ದೈವ ನೇಮ , ರಾತ್ರಿ 8ಗಂಟೆಗೆ ಅನ್ನಸಂತರ್ಪಣೆ , ರಾತ್ರಿ 9ಗಂಟೆಗೆ ಕಲ್ಲುರ್ಟಿ ಪಂಜುರ್ಲಿ ದೈವದ ನೇಮ ನಡೆಯಲಿದೆ.

ಮಾರ್ಚ್ 8 ಆದಿತ್ಯವಾರದಂದು ಸಂಜೆ 7ಗಂಟೆಗೆ ಧರ್ಮ ದೈವದ ನೇಮ, ಮಧ್ಯಾಹ್ನ 1ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.

ಮಾರ್ಚ್ 14 ಶನಿವಾರದಂದು ಬೆಳಗ್ಗೆ 7 ಗಂಟೆಗೆ ಸ್ಥಳ ಶುದ್ದಿ, ಗಣಹೋಮ , ರಾತ್ರಿ 7 ಗಂಟೆಗೆ ಸಾಂಸ್ಕ್ರತಿಕ ಕಾರ್ಯಕ್ರಮ , ರಾತ್ರಿ 8.30ಕ್ಕೆ ಅನ್ನಸಂತರ್ಪಣೆ , ರಾತ್ರಿ ಗಂಟೆ 10ಕ್ಕೆ ಶ್ರೀ ಮುಗೇರ ದೈವಗಳ ಗರಡಿ ಇಳಿಯುವುದು.

ಮಾರ್ಚ್15 ಆದಿತ್ಯವಾರದಂದು ಬೆಳಗ್ಗೆ ಗಂಟೆ 8ಕ್ಕೆ ಶ್ರೀ ಕೊರಗತನಿಯ ದೈವದ ನೇಮ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿರುವುದು

ಮಾರ್ಚ್ 14 ಶನಿವಾರದಂದು ರಾತ್ರಿ ಗಂಟೆ 7ಕ್ಕೆ ’ಕಲಾರತ್ನ’ ಪ್ರವೀಣ್ ಜಯ ವಿಟ್ಲ ಸಾರಥ್ಯದ ನ್ಯೂ ಶೈನ್ ಮೂಸಿಕಲ್ ವಿಟ್ಲ ಇವರಿಂದ ಮ್ಯೂಸಿಕಲ್ ನೈಟ್

- Advertisement -

Related news

error: Content is protected !!