Wednesday, October 28, 2026
spot_imgspot_img
spot_imgspot_img

ಹೌಸ್ ಫುಲ್ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದೆ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ “ಬನ” ಸಿನಿಮಾ

- Advertisement -
- Advertisement -

ಸತ್ಯ ಧರ್ಮದ ಮೌಲ್ಯಗಳನ್ನು ಸಾರುವ ಬನ ಸಿನಿಮಾದ ಬಗ್ಗೆ ಸಿನಿ ಪ್ರೇಕ್ಷಕರಿಂದ ಮೆಚ್ಚುಗೆ*ಅಕ್ಟೋಬರ್ 23 ರಂದು ಬಿಡುಗಡೆಗೊಂಡ ಬನ’ ತುಳು ಸಿನಿಮಾ ತುಳುನಾಡು ಸೇರಿದಂತೆ ಎಲ್ಲೆಡೆ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈಶಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಮನೋಹರ್ ರೈ ವೈಪಾಲ ನಿರ್ಮಾಣ, ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದ ‘ ಬನ ಸಿನಿಮಾ ವಿಶೇಷ ಕಥಾ ಹಂದರವನ್ನು ಹೊಂದಿದ್ದು, ಹೌಸ್ ಫುಲ್ ಪ್ರದರ್ಶನದೊಂದಿಗೆ ಸಿನಿ ಪ್ರಿಯರಿಂದ ಮೆಚ್ಚುಗೆ ಪಡೆದಿದೆ.

ತುಳುನಾಡಿನ ಮಣ್ಣಿನ ಸೊಗಡು, ಇಲ್ಲಿನ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ, ನಾಗಾರಾಧನೆಯ ಮಹತ್ವ ಹಾಗೂ ಸತ್ಯ-ಧರ್ಮದ ಮೌಲ್ಯಗಳನ್ನು ಸಾರುವ ‘ಬನ’ ಚಲ ನಚಿತ್ರವು ಪ್ರೇಕ್ಷಕರ ಗಮನ ಸೆಳೆಯು ತಿದ್ದು, ಮನರಂಜನೆಯ ಜೊತೆಗೆ ಜೀವನಕ್ಕೆ ಅಗತ್ಯವಾದ ಮೌಲ್ಯಯುತ ಸಂದೇಶವನ್ನು ನೀಡುವ ಈ ಚಿತ್ರವು ತುಳುನಾಡಿನ ಸಾಂಸ್ಕೃತಿಕ ವೈಶಿಷ್ಟ್ಯ ವನ್ನು ಬೆಳ್ಳಿತೆರೆಯ ಮೇಲೆ ಅನಾವರಣ ಗೊಳಿಸಿದೆ.ತುಳುನಾಡಿನ ಜನಜೀವನದಲ್ಲಿ ನಾಗಾರಾಧನೆಗೆ ವಿಶಿಷ್ಟವಾದ ಸ್ಥಾನ ವಿದೆ. ಇಲ್ಲಿನ ನಂಬಿಕೆಗಳು, ಆಚರಣೆ ಗಳು, ದೈವಾರಾಧನೆ ಹಾಗೂ ಪರಂ ಪರೆಗಳು ಈ ನೆಲದ ಸಾಂಸ್ಕೃತಿಕ ಅಸ್ಥಿ ತೆಯ ಭಾಗವಾಗಿವೆ.

‘ಬನ’ ಚಲನೆ ಚಿತ್ರವು ನಾಗಾರಾಧನೆಯ ಹಿನ್ನೆಲೆ ಯನ್ನು ಒಳಗೊಂಡು ತುಳುನಾಡಿನ ಧಾರ್ಮಿಕ ನಂಬಿಕೆ ಮತ್ತು ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಪ್ರೇಕ್ಷಕರ ಮುಂದಿಡುತ್ತದೆ. ಗ್ರಾಮೀಣ ಬದುಕಿನ ಸರಳತೆ, ಮಣ್ಣಿನೊಂದಿಗಿನ ಜನರ ನಂಟು ಹಾಗೂ ತಲೆಮಾರುಗಳಿಂದ ನಡೆದುಕೊಂಡು ಬಂದ ಸಂಪ್ರದಾಯ ಗಳ ಚಿತ್ರಣವೂ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದೆ.

ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಉಪ್ಪಳ, ನಟಿ ರೂಪಾ ವರ್ಕಾಡಿ, ನಾಯಕನಾಗಿ ನಿಹಾಲ್ ರೈ, ನಾಯಕಿಯಾಗಿ ಕೃತಿ ಶ್ರೀನಿವಾಸ್ ಪೂಜಾರಿ ನಟಿಸಿದ್ದಾರೆ. ಜೊತೆಗೆ ಶರತ್ ಆಳ್ವ, ಪ್ರಿಯಾ ಶೆಟ್ಟಿ, ವಿಜಯಹರಿ ರೈ, ಭವ್ಯಶ್ರಿ ಪೂಜಾರಿ, ವಿಕಾಸ್ ಪುತ್ರನ್, ನಿಜರೂಪ ಶೆಟ್ಟಿ, ಸವಿತಾ ಅಂಚನ್ , ಧನ್ಯ ಪೂಜಾರಿ, ಪ್ರವೀಣ್ ಕೊಡಕ್ಕಲ್ ಸಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರುಣ್ ರೈ ಪುತ್ತೂರು ಛಾಯಾಗ್ರಹಣ, ನವೀನ್ ನೇರಳ್ತೊಡಿ ಸಂಕಲನ, ಜಯಕಾರ್ತಿ ಸಂಗೀತ ನೀಡಿದ್ದಾರೆ.

- Advertisement -

Related news

error: Content is protected !!