Friday, March 29, 2024
spot_imgspot_img
spot_imgspot_img

ವಿಟ್ಲ: ಸೇವಾ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಬಂಡಾರ್ಕರ್ ಇವರ ಟ್ರಸ್ಟ್ ನಿಂದ RMSA ಸ.ಪ್ರೌ.ಶಾಲೆಗೆ ಕಂಪ್ಯೂಟರ್ ವಿತರಣೆ

- Advertisement -G L Acharya panikkar
- Advertisement -
vtv vitla

ವಿಟ್ಲ: ಪ್ರಾಂತೀಯ ಸಮ್ಮೇಳನದ ಪರವಾಗಿ ಕೊಡಲ್ಪಡುವ ಲಯನ್ಸ್ ಕ್ಲಬ್ 317d ಇದರ ಆದಿತ್ಯ ಪ್ರಾಂತೀಯ ಸಮ್ಮೇಳನದಲ್ಲಿ ಸನ್ಮಾನಿಸಲ್ಪಟ್ಟ ಸೇವಾ ಲೈಫ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅರ್ಜುನ್ ಬಂಡಾರ್ಕರ್‌ ಇವರ ಟ್ರಸ್ಟ್‌ನಿಂದ ವಿಟ್ಲ RMSA ಸರಕಾರಿ ಪ್ರೌಢ ಶಾಲೆಗೆ 3 ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ವಿತರಿಸಲಾಯಿತು.

ಸಮಾಜ ಸೇವೆಯ ಮೂಲಕ ಕೊಡುಗೈ ದಾನಿಯಾಗಿ ಹಲವರ ಬಾಳಿಗೆ ಬೆಳಕಾದ ಸೇವಾ ಲೈಫ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅರ್ಜುನ್ ಭಂಡಾರ್ಕರ್‌ ಶಾಲಾ ಮಕ್ಕಳಿಗೆ ತಿಂಡಿ ತಿನಿಸು ಹಾಗೂ ತಂಪು ಪಾನೀಯಗಳನ್ನು ನೀಡಿದರು.

ವಿಟ್ಲRMSA ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಕಂಪ್ಯೂಟರ್‌ನ ಅಗತ್ಯತೆಯ ಬಗ್ಗೆ ಸ್ಪಂದಿಸಿದ ಸೇವಾ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಬಂಡಾರ್ಕರ್‌ ಶಾಲೆಗೆ 3 ಕಂಪ್ಯೂಟರ್‌ಗಳನ್ನು ನೀಡಿ ಶಾಲೆಯ ಅಭಿವೃದ್ಧಿಗೆ ಸಹಕರಿಸಿದರು.

ಶಾಲೆಗೆ ಮೂರು ಕಂಪ್ಯೂಟರ್‌ಗಳನ್ನು ಒದಗಿಸಿ ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ಪ್ರಾಂತೀಯ ಅಧ್ಯಕ್ಷ ಸುದರ್ಶನ್ ಪಡಿಯಾರ್ ಮತ್ತು ಲಯನ್ಸ್ ಕ್ಲಬ್‌ನ ಎಲ್ಲಾ ಸದಸ್ಯರಿಗೆ ಶಾಲಾಭಿವೃದ್ಧಿ ಸಮಿತಿ ಹಾಗೂ ಶಾಲಾ ವತಿಯಿಂದ ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಸುಬ್ರಾಯ ಪೈಯವರು ಕೃತಜ್ಷತೆ ಸಲ್ಲಿಸಿದರು.

ಶಾಲೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಿದ ಸೇವಾ ಲೈಫ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅರ್ಜುನ್ ಬಂಡಾರ್ಕರ್‌ರವಗೆ ಪ್ರಾಂತೀಯ ಅಧ್ಯಕ್ಷ ಸುದರ್ಶನ್ ಪಡಿಯಾರ್ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸುದರ್ಶನ್ ಪಡಿಯಾರ್ ಎಂ.ಜೆ.ಎಫ್ ಪ್ರಾಂತೀಯ ಅಧ್ಯಕ್ಷರು ಪ್ರಾಂತ್ಯ VII, ಲಯನ್ಸ್ ಕ್ಲಬ್ ಸಿಟಿ ಇದರ ಸದಸ್ಯರಾದ ಮೋಹನ್ ಕಟ್ಟೆ, ಜಯರಾಮ್ ಬಲ್ಲಾಳ್, ಸರಕಾರಿ ಪ್ರೌಢ ಶಾಲೆ ವಿಟ್ಲ RMSA ಇಲ್ಲಿನ ಮುಖ್ಯೋಪಾಧ್ಯಯಿನಿ ಅನ್ನಪೂರ್ಣ, ಉದ್ಯಮಿ ಶುಭಾಶಚಂದ್ರ ನಾಯಕ್, ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಸುಬ್ರಾಯ ಪೈ, ಲಯನ್ಸ್ ಕ್ಲಬ್ ಪುತ್ತೂರು ಕಾವು ಕೆ ಸಿ ಅಶೋಕ್ ಶೆಟ್ಟಿ, ಪುತ್ತೂರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಗಣೇಶ್ ಶೆಟ್ಟಿ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!