Sunday, June 14, 2026
spot_imgspot_img
spot_imgspot_img

ವಿಟ್ಲ: ಮನೆ ಅಂಗಳದಲ್ಲಿ ನಿಲ್ಲಿಸಿದ ಪಿಕಪ್ ವಾಹನ ಕಳವು

- Advertisement -
- Advertisement -
vtv vitla

ವಿಟ್ಲ: ಮನೆ ಅಂಗಳದಲ್ಲಿ ನಿಲ್ಲಿಸಿದ ಸರಕು ತುಂಬಿದ ಪಿಕಪ್ ವಾಹನವು ಕಳವಾದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಡ್ತಮುಗೇರುನಲ್ಲಿ ನಡೆದಿದೆ.

ಎಂ.ಹೆಚ್.ಶಾಮಿಯಾನ ಸಂಸ್ಥೆಗೆ ಸೇರಿದ ಮಹೀಂದ್ರ ಪಿಕಪ್ ವಾಹನದಲ್ಲಿ ಶುಕ್ರವಾರ ರಾತ್ರಿ ಮಾಲಿಕ ಅನೀಸ್ ಕಬ್ಬಿಣದ ಸರಕುಗಳನ್ನು ತುಂಬಿಸಿ ಎಂದಿನಂತೆ ಮನೆ ಅಂಗಳದಲ್ಲಿ ನಿಲ್ಲಿಸಿದ್ದರು. ಶನಿವಾರ ಬೆಳಗ್ಗೆ ನೋಡಿದಾಗ ಪಿಕಪ್ ಕಳ್ಳತನವಾದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಿದ್ದು, ವಾಹನದ ಬಗ್ಗೆ ಸುಳಿವು ದೊರೆತಲ್ಲಿ ವಿಟ್ಲ ಠಾಣೆಗೆ ಅಥವಾ 9986474053 ಸಂಖ್ಯೆಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

- Advertisement -

Related news

error: Content is protected !!