Sunday, April 28, 2024
spot_imgspot_img
spot_imgspot_img

ವಿಟ್ಲ: (ಡಿ 7-10 )ಕಬ್ಸ್-ಬುಲ್ ಬುಲ್ಸ್ ಉತ್ಸವ ಸ್ಕೌಟ್ಸ್ -ಗೈಡ್ಸ್ ಮೇಳ ರೋವರ್‍ಸ್- ರೇಂಜರ್‍ಸ್ ಸಮಾಗಮ ಕ್ಯಾಂಪೋರಿ 2023-2024-ಪತ್ರಿಕಾಗೋಷ್ಠಿ

- Advertisement -G L Acharya panikkar
- Advertisement -

ದ.ಕ.ಜಿ.ಪಂ. ಶಾಲಾ ಶಿಕ್ಷಣ ಇಲಾಖೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮತ್ತು ವಿಟ್ಲ ಸ್ಥಳೀಯ ಸಂಸ್ಥೆ ಇವರ ಸಹಭಾಗಿತ್ವದಲ್ಲಿ ಜಿಲ್ಲಾ ಕ್ಯಾಂಪೋರಿ 2023-2024 ಕಬ್ಸ್-ಬುಲ್ ಬುಲ್ಸ್ ಉತ್ಸವ ಸ್ಕೌಟ್ಸ್ -ಗೈಡ್ಸ್ ಮೇಳ ರೋವರ್‍ಸ್- ರೇಂಜರ್‍ಸ್ ಸಮಾಗಮವು ಡಿ. 7 ರಿಂದ 10 ರವರೆಗೆ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಈ ಬೃಹತ್‌ ಕಾರ್ಯಕ್ರಮದ ಬಗ್ಗೆ ಪತ್ರಿಕಾಗೋಷ್ಠಿ ನಡೆಯಿತು.

ಡಿ. 7 ರಿಂದ 10 ರವರೆಗೆ ನಾಲ್ಕು ದಿನವೂ ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಾಹಸಮಯ ಚಟುವಟಿಕೆಗಳ ಉದ್ಘಾಟನೆ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೇಳ ಉದ್ಘಾಟನೆ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ, ಕಬ್ಸ್-ಬುಲ್ ಬುಲ್ಸ್ ಉತ್ಸವ ಉದ್ಘಾಟನೆ, ವೈದ್ಯಲೋಕ ಉದ್ಘಾಟನೆ, ಜಾನಪದ ಲೋಕ ಉದ್ಘಾನೆ, ಹಾಗೂ ಸಮಾರೋಪ ಸಮಾರಂಭ ಉದ್ಘಾಟನೆಯನ್ನು ಹಲವು ಗಣ್ಯರು ಉದ್ಘಾಟಿಸಲಿದ್ದಾರೆ.


ಎರಡೂವರೆ ಸಾವಿರ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಶಿಕ್ಷಕ ವೃಂದ ಸೇರಿದಂತೆ ನಾಲ್ಕು ಸಾವಿರ ಜನರ ಸಮಾಗಮದಲ್ಲಿ ಈ ಬೃಹತ್‌ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ತಂಗಲು ಸುಸಜ್ಜಿತವಾದ ವಸತಿ ಗೃಹ, ಊಟ- ಉಪಚಾರದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಪ್ರದೀಪ್‌ ಕಾರ್ಯದರ್ಶಿ ಭಾರತ್‌ ಸ್ಕೌಟ್ಸ್ ಗೈಡ್ಸ್‌ ವಿಟ್ಲ ಸ್ಥಳೀಯ ಸಂಸ್ಥೆ ಇವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಭಾಕರ ಶೆಟ್ಟಿ ದಂಬೆಕಾನ ಸ್ವಾಗತ ಸಮಿತಿ ಅಧ್ಯಕ್ಷರು, ನಾರಾಯಣ ನಾಯ್ಕ ಸ್ಕೌಟ್ಸ್ ಗೈಡ್ಸ್‌ ಜಿಲ್ಲಾ ಪ್ರತಿನಿಧಿ, ವಿಶ್ವನಾಥ ಗೌಡ ಸ್ಥಳೀಯ ಸಂಸ್ಥೆ ಕೋಶಾಧಿಕಾರಿ ಉಪಸ್ಥಿತರಿದ್ದರು.

- Advertisement -

Related news

error: Content is protected !!