Monday, November 9, 2026
spot_imgspot_img
spot_imgspot_img

ವಿಟ್ಲ: ಎಳೆಯರ ಬಳಗ ಮತ್ತು ಆಯುರ್ವೇದ ಸಂಶೋಧನಾ ಕೇಂದ್ರ ( ರಿ), ವಿಟ್ಲ ಇದರ ಪ್ರಾಯೋಜಕತ್ವದಲ್ಲಿ 49ನೇ ವರ್ಷದ ಧನ್ವಂತರಿ ಜಯಂತಿ ಮಹೋತ್ಸವ

- Advertisement -
- Advertisement -

ಬದನಾಜೆ ಶಂಕರ ಭಟ್ ದಂಪತಿ ಹಾಗೂ ಡಾ. ಪದ್ಮರಾಜ್ ಕೆ ಅವರಿಗೆ ಸನ್ಮಾನ

ವಿಟ್ಲ: ನ. 8 ಆದಿತ್ಯವಾರದಂದು ವಿಟ್ಲದ ಮಂಗಳಾ ಮಂಟಪದಲ್ಲಿ 49ನೇ ವರ್ಷದ ಧನ್ವಂತರಿ ಜಯಂತಿ ಮಹೋತ್ಸವವು ಶ್ರೀ ಧನ್ವಂತರಿ ವಿಷ್ಣು ಸಹಸ್ರನಾಮ ಭಜನಾವಳಿಯೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಡಾ. ಪದ್ಮರಾಜ್ ಕೆ ಅವರು ಪ್ರಾಸ್ತಾವಿಕ ಭಾಷಣ ಮಾಡಿ, ಸಂಸ್ಥೆಯ ಕಿರು ಪರಿಚಯ ಹಾಗೂ ಧನ್ವಂತರಿ ಜಯಂತಿಯ ಮಹತ್ವವನ್ನು ತಿಳಿಸಿದರು.

ಅವರ ವೈದ್ಯಕೀಯ ಹಾಗೂ ಸಮಾಜ ಸೇವೆಯನ್ನು ಪರಿಗಣಿಸಿ, ದೀಪಾವಳಿಯ ಶುಭ ಸಂದರ್ಭದಲ್ಲಿ ಆಯುಷ್ ಫೆಡರೇಶನ್ ಆಫ್ ಇಂಡಿಯಾ (ರಿ) ದಕ್ಷಿಣ ಕನ್ನಡ ಹಾಗೂ AFI ಬಂಟ್ವಾಳ ಶಾಖೆಯ ಸಹಯೋಗದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಮಹೋತ್ಸವವನ್ನು 49 ವರ್ಷಗಳ ಹಿಂದೆ ಪ್ರಾರಂಭಿಸಿದ ಬದನಾಜೆ ಶಂಕರ ಭಟ್ ದಂಪತಿಗಳು ಹಾಗೂ ಇದನ್ನು ಮುನ್ನಡೆಸುತ್ತಿರುವ AFI ಬಂಟ್ವಾಳ ಸದಸ್ಯ ಡಾ. ಪದ್ಮರಾಜ್ ಕೆ ಅವರನ್ನು AFI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಡಾ. ಕೃಷ್ಣ ಎಂ. ಗೋಖಲೆ ಅವರು ಶಾಲು, ಹಾರ ಹಾಕಿ ಸನ್ಮಾನಿಸಿ, ಸತತ 49 ವರ್ಷಗಳಿಂದ ಕಾರ್ಯಕ್ರಮ ನಡೆಸುತ್ತಿರುವ ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು.

ಈ ಕಾರ್ಯಕ್ರಮದಲ್ಲಿ ಮುಗುಳಿ ತಿರುಮಲೇಶ್ವರ ಭಟ್, ಶ್ರೀಮತಿ ಪದ್ಮಿನಿ ಆರ್. ಭಟ್, ಬದನಾಜೆ ಶಂಕರನಾರಾಯಣ ಪ್ರಸಾದ್ ಮತ್ತು ದುರ್ಗಾಪ್ರಸಾದ್ ಉಪಸ್ಥಿತರಿದ್ದರು.ಕೊನೆಯಲ್ಲಿ ಮಹಾಮಂಗಳಾರತಿ, ಧನ್ಯವಾದ ಸಮರ್ಪಣೆ ಮತ್ತು ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

- Advertisement -

Related news

error: Content is protected !!