ಪುತ್ತೂರು: ಗ್ರಾಮೀಣ ಪ್ರದೇಶದ ಜನತೆಯ ಶೈಕ್ಷಣಿಕ ಕನಸುಗಳನ್ನು ಸಾಕಾರಗೊಳಿಸುವ ಉದ್ದೇಶದಿಂದ ೧೯೬೫ ರಲ್ಲಿ ಪುತ್ತೂರಿನ ಜನತೆಯ ಪ್ರೋತ್ಸಾಹದಿಂದ ರೂಪುಗೊಂಡ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು (ರಿ) ಇದರ ಮೊದಲ ಸಂಸ್ಥೆ ವಿವೇಕಾನಂದ ಪದವಿಪೂರ್ವ ಕಾಲೇಜು. ಪುತ್ತೂರು ಮತ್ತು ಆಸುಪಾಸಿನ ಗ್ರಾಮೀಣ ಮತ್ತು ಹಿಂದುಳಿದ ತಾಲೂಕುಗಳ ಪ್ರತಿಯೊಬ್ಬ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸ್ಥಾಪನೆಗೊಂಡ ವಿವೇಕಾನಂದ ಪದವಿಪೂರ್ವ ಕಾಲೇಜು ಮೌಲ್ಯಾಧರಿತ ಕಲಿಕೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುವ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾಗಿ ಕನ್ನಡ ನಾಡಿನಾದ್ಯಂತ ಗುರುತಿಸಿಕೊಂಡಿದೆ.
ವಿವೇಕಾನಂದ ಪದವಿಪೂರ್ವ ಕಾಲೇಜು ಶಿಕ್ಷಣ ಗುಣಮಟ್ಟಕ್ಕೆ ಹೆಸರುವಾಸಿ. ಅನುಭವಿ ಸೃಜನಶೀಲ ಉಪನ್ಯಾಸಕ ತಂಡವೇ ವಿದ್ಯಾಸಂಸ್ಥೆಯ ಹೆಗ್ಗಳಿಕೆ. ನೂರಕ್ಕೂ ಮೀರಿದ ಉಪನ್ಯಾಸಕರು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಇಲ್ಲಿ ಬುನಾದಿಯನ್ನು ಒದಗಿಸುತ್ತಿದ್ದಾರೆ. ಶಿಕ್ಷಣವೆಂದರೆ ಪಾಠವಷ್ಟೇ ಅಲ್ಲ ಎಂಬುದು ಈ ಕಾಲೇಜಿನ ದೃಢ ಸಿದ್ದಾಂತ. ಹಾಗಾಗಿಯೇ ಕಾಲೇಜಿನ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಂತಹ ಮಹತ್ತರವಾದ ಕಾರ್ಯವು ಸದ್ದಿಲ್ಲದೆ ನಡೆಯುತ್ತಲೇ ಇದೆ.
ಈ ವಿದ್ಯಾಸಂಸ್ಥೆಯು ಜಾತಿ, ಮತ , ಧರ್ಮ ಎಂಬ ಭೇದಭಾವವಿಲ್ಲದೇ ಎಲ್ಲರಿಗೂ ಸಮಾನವಾದ ವಿದ್ಯಾಭ್ಯಾಸದ ಅವಕಾಶವನ್ನು ಕಲ್ಪಿಸಿದೆ. ಅದರಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಚಾರದಲ್ಲಿ ಈ ಸಂಸ್ಥೆಯು ಆಶಾಕಿರಣವಾಗಿದೆ. ವಿದ್ಯಾರ್ಥಿಗಳನ್ನು ಸುಶಿಕ್ಷಿತ , ಸ್ವಾವಲಂಬಿಗಳನ್ನಾಗಿ ಮಾಡುವ ಜೊತೆಗೆ ದೇಶಪ್ರೇಮ ಹೊಂದಿದ ನಾಗರಿಕ ಸತ್ಪ್ರಜೆಗಳಾಗಿ ರೂಪಿಸುವ ಉನ್ನತ ಹೊಣೆಗಾರಿಕೆಯನ್ನು ಹೊತ್ತುಕೊಂಡು ಈ ವಿವೇಕಾನಂದ ವಿದ್ಯಾಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ.
ಉತ್ತಮ ಫಲಿತಾಂಶ:
ವಿವೇಕಾನಂದ ವಿದ್ಯಾಸಂಸ್ಥೆಯು ಕಳೆದ ಹಲವು ವರ್ಷಗಳಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸುತ್ತಾ ಬಂದಿರುವುದು ಗಮನಾರ್ಹ. ೨೦೧೯-೨೦ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿಗೆ ಶೇ ೯೬ ಫಲಿತಾಂಶವನ್ನು ಪಡೆದಿದೆ. ಸುಮಾರು ೨೨೪ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ೫೯೧ ಅಂಕಗಳನ್ನು ಗಳಿಸುವುದರ ಮೂಲಕ ವಿಜಿತ್ ಕೃಷ್ಣ ಇವರು ರಾಜ್ಯಕ್ಕೆ ಆರನೇ ರ್‍ಯಾಂಕ್ ಹಾಗೂ ಪುತ್ತೂರು ತಾಲೂಕಿಗೆ ಮತ್ತು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವರಲಕ್ಷ್ಮಿ ಪಿ ಎಸ್ 590 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ ಎಂಟನೇ ರ್‍ಯಾಂಕ್ ಹಾಗೂ ಪುತ್ತೂರು ತಾಲೂಕಿಗೆ ಮತ್ತು ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಕಲಾ ವಿಭಾಗದಲ್ಲಿ 574 ಅಂಕಗಳನ್ನು ಪಡೆಯುವುದರ ಮೂಲಕ ವೀರೇಶ ತಾಲೂಕಿನಲ್ಲಿ ಮತ್ತು ಕಾಲೇಜಿಗೆ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಪ್ರತಿ ವರ್ಷ ರಾಜ್ಯ ಮಟ್ಟದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಿರುವುದು ನೈಜ ಶಿಕ್ಷಣದ ಗುಣಮಟ್ಟವನ್ನು ತೋರಿಸುತ್ತದೆ. ಅಲ್ಲದೇ ಸ್ಪರ್ಧಾತ್ಮಕ ಪರಿಕ್ಷೆಗಳಲ್ಲೂ ಇಲ್ಲಿನ ವಿದ್ಯಾರ್ಥಿಗಳು ಮಿಂಚುತ್ತಿರುವುದು ಒಂದು ಅಭೂತಪೂರ್ವ ಸಾಧನೆ. ಸಿ.ಇ.ಟಿ , ಜೆ.ಇ.ಇ ಮತ್ತು ನೀಟ್ ಪರೀಕ್ಷೆ ಗಳಲ್ಲೂ ಪುತ್ತೂರಿನ ಅಸುಪಾಸಿನಲ್ಲೇ ಅತ್ಯಧಿಕ ಫಲಿತಾಂಶವನ್ನು ದಾಖಲಿಸುತ್ತಾ ಬಂದಿರುವುದು ಈ ವಿದ್ಯಾಸಂಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಐಐಟಿ ಹಾಗೂ ಎನ್‌ಐಟಿಗಳಿಗೆ ಪ್ರವೇಶ ಕಲ್ಪಿಸುವ 2020 ನೇ ಸಾಲಿನ ಜೆಇಇ ಮೈನ್ಸ್ ಪರೀಕ್ಷೆ ಯಲ್ಲಿ 99.864 ಪರ್ಸಂಟೈಲ್ ಅಂಕ ಗಳಿಸುವುದರ ಮೂಲಕ ಗೌರೀಶ ಕಜಂಪಾಡಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಈತನು ಕೆವಿಪಿವೈ ಲಿಖಿತ ಪರೀಕ್ಷೆಯಲ್ಲೂ ತೇರ್ಗಡೆ ಹೊಂದಿರುತ್ತಾನೆ.
ನೆಚ್ಚಿನ ಆಯ್ಕೆ:
ರಾಜ್ಯದ ಮೂಲೆಮೂಲೆಗಳಿಂದ ವಿದ್ಯಾರ್ಥಿಗಳು ವಿವೇಕಾನಂದ ಪದವಿಪೂರ್ವ ಕಾಲೇಜನ್ನು ಆಯ್ಕೆಮಾಡಿಕೊಂಡು ಜ್ಞಾನಾರ್ಜನೆ ಪಡೆಯುತ್ತಿದ್ದಾರೆ. ಪ್ರಸ್ತುತ ಸುಮಾರು 2000 ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ಈ ಶಿಕ್ಷಣ ಸಂಸ್ಥೆ ರಾಜ್ಯದಲ್ಲೇ ಪ್ರತಿಷ್ಠಿತ ಕಾಲೇಜು ಎಂದು ಗುರುತಿಸುವ ಮಟ್ಟಿಗೆ ಬೆಳೆದು ನಿಂತಿದೆ.
ವಿಜ್ಞಾನ, ವಾಣಿಜ್ಯ ಮತ್ತು ಕಲಾವಿಭಾಗಗಳಲ್ಲಿ ಶಿಕ್ಷಣವನ್ನು ನೀಡಲು ಬೇಕಾದ ಕೊಠಡಿಗಳು, ಸುಸಜ್ಜಿತವಾದ ಎಂಟು ಪ್ರಯೋಗಾಲಯಗಳು, ವಿದ್ಯಾಭ್ಯಾಸಕ್ಕೆ ಸೂಕ್ತ ಪರಿಸರವನ್ನು ನಿರ್ಮಿಸುವ ವಸತಿ ನಿಲಯಗಳು ವಿಸ್ತಾರವಾದ ಮೈದಾನ ಮತ್ತು ವ್ಯಾಯಾಮ ಶಾಲೆಗಳನ್ನು ಹೊಂದಿರುವ ಈ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆ, ದೇಶಪ್ರೇಮ, ಶಿಸ್ತು, ಸಚ್ಚಾರಿತ್ರ್ಯ, ಉತ್ತಮ ಹವ್ಯಾಸ, ಸದಭಿರುಚಿಗಳನ್ನು ಪೋಷಿಸುವ, ಬದುಕಿನ ಸಮಸ್ಯೆಗಳನ್ನು ಎದುರಿಸುವ ಮನೋಭಾವವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಅರ್ಹ ವಿದ್ಯಾರ್ಥಿಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ, ಖಾಸಗಿ ಸಂಘ ಸಂಸ್ಥೆಗಳಿಂದ ಮತ್ತು ಹಲವಾರು ದತ್ತಿ ನಿಧಿಗಳಿಂದ ಲಭ್ಯವಾಗುವ ವಿದ್ಯಾರ್ಥಿ ವೇತನ ಹಾಗೂ ಬಹುಮಾನ ಸೌಲಭ್ಯಗಳು ಇಲ್ಲಿವೆ. ಎಸ್.ಎಸ್ ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ೯೫% ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಶುಲ್ಕ ವಿನಾಯಿತಿಯಿದೆ. ಅರ್ಹ ಬಡ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿಯಿದ್ದು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ.
ಸಿ.ಇ.ಟಿ , ಜೆ.ಇ.ಇ, ನೀಟ್ ಮತ್ತು ಸಿ.ಪಿ.ಟಿ ತರಬೇತಿ:
ಸ್ಪರ್ಧಾತ್ಮಕ ಪರೀಕ್ಷಾ ಘಟಕದ ವತಿಯಿಂದ ಸಿ.ಇ.ಟಿ. ನೀಟ್ ,ಜೆ.ಇ.ಇ ಮತ್ತು ಇತರ ರಾಷ್ಟ್ರಮಟ್ಟದ ವೈದ್ಯಕೀಯ-ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ಬೇಕಾದ ಮಾಹಿತಿ ಮತ್ತು ನುರಿತ ಅಧ್ಯಾಪಕರಿಂದ ವಿವಿಧ ರೀತಿಯ ತರಬೇತಿಗಳ ಸೌಲಭ್ಯಗಳಿದ್ದು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿ. ಪಿ. ಟಿ ತರಬೇತಿಯ ವ್ಯವಸ್ಥೆಯಿದೆ. ಇದರಲ್ಲಿ ಸ್ಫರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುವುದು. ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಮತ್ತು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ಈ ಎರಡು ಪರೀಕ್ಷೆಗಳ ಮೇಲೆ ಈ ವಿದ್ಯಾಸಂಸ್ಥೆಯು ಕೇಂದ್ರಿಕರಿಸಲಿದೆ. ವಿದ್ಯಾರ್ಥಿಗಳಲ್ಲಿ ವಿಷಯದ ಮುಲಭೂತ ಪರಿಕಲ್ಪನೆ, ಸಮಸ್ಯಾತ್ಮಕ ಪರಿಹಾರಗಳ ಕೌಶಲ್ಯ, ವಿದ್ಯಾರ್ಥಿಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಮೂಡಿಸಿ ವಿಷಯ ಜ್ಞಾನವನ್ನು ಹೊಂದಿರುವ ಗುರಿಯನ್ನು ಸಲಲಿತವಾಗಿ ಪರಿಪೂರ್ಣ ಜ್ಞಾನದೊಂದಿಗೆ ಸಾಧಿಸಲು ಅನುಕೂಲವಾಗಲಿದೆ. ಇದೇ ರೀತಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸಲು ತುಂಬಾ ಸಹಕಾರಿಯಾಗುವುದು.
ನಿಧಾನಕಲಿಕೆಯ ವಿದ್ಯಾರ್ಥಿಗಳಿಗೆ ಆಯಾ ವಿಷಯಗಳಲ್ಲಿ ಪೂರಕ ತರಗತಿಗಳು ಹಾಗೂ ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತದೆ. ಪದವಿಪೂರ್ವ ಶಿಕ್ಷಣ ಇಲಾಖೆ ನಿಗದಿಪಡಿಸಿದ ಪರೀಕ್ಷೆಗಳಲ್ಲದೆ ಹೆಚ್ಚುವರಿಯಾಗಿ ಎರಡು ಆಂತರಿಕ, ಎರಡು ಪೂರ್ವಸಿದ್ಧತಾ ಪರೀಕ್ಷೆ ಮತ್ತು ಅನೇಕ ತರಗತಿ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು ಮೌಲ್ಯಮಾಪನದ ಅಂಕಗಳನ್ನು ಎಸ್.ಎಂ.ಎಸ್ ಮೂಲಕ ಹೆತ್ತವರಿಗೆ ರವಾನಿಸಲಾಗುತ್ತದೆ. ಕಾಲೇಜಿನಲ್ಲಿ ಸುಸಜ್ಜಿತವಾದ ಗ್ರಂಥಾಲಯವಿದ್ದು ಸಾಹಿತ್ಯಕೃತಿಗಳನ್ನು ಅಭ್ಯಾಸ ಮಾಡಿ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೆ ಪೂರಕವಾದ ವಿಶೇಷ ಪುಸ್ತಕಗಳನ್ನೂ ಮನನ ಮಾಡಬಹುದಾಗಿದೆ.
ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್ ತರಬೇತಿ:
ಕೊರೊನಾದಿಂದಾಗಿ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಹೊಡೆತ ಬೀಳದಂತೆ ನೊಡಿಕೊಳ್ಳಲು ಸದಾ ವಿದ್ಯಾರ್ಥಿಗಳ ಮನೋಧೈರ್ಯವನ್ನು ಹೆಚ್ಚಿಸುತ್ತಾ ಅವರ ಹಿತದೃಷ್ಠಿಯಿಂದ ಹೊಸತನಕ್ಕೆ ನಾಂದಿ ಹಾಡಲು ವಿವೇಕಾನಂದ ಸಂಸ್ಥೆಯು ಮುಂದಾಗಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ಕಾಲೇಜಿನ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಉಚಿತ ಆನ್‌ಲೈನ್ ಕೋಚಿಂಗ್ ತರಗತಿಯು ಆರಂಭಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಸುವರ್ಣವಕಾಶವನ್ನು ಒದಗಿಸುತ್ತಿದೆ. ಸ್ಫರ್ಧಾತ್ಮಕ ಪರೀಕ್ಷೆಗಳ ಸಿದ್ದತೆಗಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಸಿ.ಇ.ಟಿ., ನೀಟ್ ಉಚಿತ ಆನ್‌ಲೈನ್ ತರಗತಿಗಳನ್ನು ನಡೆಸಲಾಗಿದೆ.
ಕನಸುಗಳು-2020 :
ಕೊರೋನದ ನಡುವೆ ಪರೀಕ್ಷೆ ಗೆದ್ದು ಬಂದ 2019-20 ನೇ ಸಾಲಿನ ಹತ್ತನೇ ತರಗತಿಯ ಮತ್ತು ಕೊರೋನದ ನಡುವೆ ಶಾಲೆಗೆ ಹೋಗಲು ಕಾತರದಲ್ಲಿ ಕಾಯುತ್ತಿರುವ 2020-21 ಸಾಲಿನ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗಾಗಿ ಕನಸುಗಳು-೨೦೨೦ ಕಾರ್ಯಕ್ರಮದ ಪ್ರಯುಕ್ತ ವಿವಿಧ ರೀತಿಯ ಆನ್‌ಲೈನ್ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು. ಕೊರೋನಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಇಂತಹ ಪೂರಕ ಕೆಲಸಗಳಲ್ಲಿ ತೊಡಗಿಸಿಕೊಂಡು ಅವರ ಸುಂದರ ಬದುಕಿಗೆ ಭದ್ರ ಬುನಾದಿಯನ್ನು ಕಲ್ಪಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶ.
ವಿಜ್ಞಾನ ಸ್ತಬ್ಧ ಮಾದರಿ ರಚನೆ, ಯುವ ವೈದ್ಯರು, ಕನ್ನಡ ಯುವ ಪತ್ರಕರ್ತ, ತುಳು ಒಗಟುವಿಗೆ ಉತ್ತರ, ಮೇಧಾವಿ, ಜನರಲ್ ಕ್ವಿಜ್, ಚರ್ಚಾ ಸ್ಫರ್ಧೆ, ಪ್ರಾಕೃತಿಕ ರಂಗೋಲಿ, ವರ್ಣ ಚಿತ್ರ ರಚನೆ, ಪೆನ್ಸಿಲ್ ಆರ್ಟ್ ,ಶಾಸ್ತ್ರೀಯ ಸಂಗೀತ ಗಾಯನ, ಯಕ್ಷಗಾನ ಭಾಗವತಿಕೆ ಸ್ಫರ್ಧೆ, ಯಕ್ಷಗಾನ ಅರ್ಥಗಾರಿಕೆ ಸ್ಫರ್ಧೆ, ಕನ್ನಡ ಕವನ ರಚನೆ, ಜನಪದ ಗಾಯನ ರಚನೆ ಹೀಗೆ ಒಟ್ಟು ೧೫ ವಿವಿಧ ರೀತಿಯ ಸ್ಫರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ ನಿಯೋಜಿಸಲಾಗಿದೆ. ಸುಮಾರು ೬೫೦ ವಿದ್ಯಾರ್ಥಿಗಳು ಈ ಸ್ಫರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ವಿವಿಧ ಸಂಘ:
ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳಿಗೆ ಸೂಕ್ತ ಅವಕಾಶಗಳನ್ನು ನೀಡಿ ಅವರ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ’ಚಿಗುರು’ ಭಿತ್ತಿಪತ್ರಿಕೆ ಹಾಗೂ ವಾರ್ಷಿಕ ವಿಶೇಷಾಂಕ, ಲಲಿತಾಕಲಾ ಸಂಘ, ವಿಜ್ಞಾನ ಸಂಘ, ವಾಣಿಜ್ಯ ಸಂಘ, ಮಾನವಿಕ ಸಂಘ ಮುಂತಾದವುಗಳು ಕಾರ್ಯ ನಿರ್ವಹಿಸುತ್ತವೆ. ಸಾಹಿತ್ಯಕ, ಸಾಂಸ್ಕೃತಿಕ, ವೈಜ್ಞಾನಿಕ ಮತ್ತು ಕ್ರೀಡಾವಲಯಗಳಲ್ಲಿ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಜಾಗತಿಕ ಮಟ್ಟದ ಸಾಧನೆಯನ್ನು ಮಾಡಿ ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತಂದ ಪ್ರತಿಭಾವಂತ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಪ್ರತಿಭಾನ್ವಿತ ವಿದ್ಯಾಥಿಗಳ ಕೊಡುಗೆ:
ಕನ್ನಡ ಸಾಂಸ್ಕೃತಿಕ ಸಂಘ , ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಯ ಕನ್ನಡ ವಿಜ್ಞಾನ ಪತ್ರಿಕೆ ಕಣಾದ ದ ೪೫ ನೆಯ ಸಂಚಿಕೆಗಾಗಿ ನಡೆಸಿದ ಡಾ| ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸ್ಮಾರಕ ವಿಜ್ಞಾನ ಪ್ರಬಂಧ ಸ್ಪರ್ಧೆಯ ಕಾಲೇಜು ವಿಭಾಗದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ವೈಷ್ಣವಿ ಜಿ.ಕೆ ಮತ್ತು ಶ್ರಾವ್ಯ ಅವರು ಬರೆದ ವಿಜ್ಞಾನಿಗಳ ಚಿತ್ತ ನ್ಯಾನೋ ತಂತ್ರಜ್ಞಾನದತ್ತ ಎಂಬ ಲೇಖನವು ಪ್ರಥಮ ಬಹುಮಾನ ಮತ್ತು ನಿಶಿತಾ ಬಿ ಬರೆದ ವಿದ್ಯುತ್ಕಾಂತೀಯ ಅಲೆಗಳು ಮತ್ತು ಅವುಗಳ ಉಪಯೋಗಗಳು ಎಂಬ ಲೇಖನಕ್ಕೆ ದ್ವಿತೀಯ ಬಹುಮಾನವು ಗಳಿಸಿದೆ.
ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸಿದ ಸೀನಿಯರ್ ಗ್ರೇಡ್ ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ಕಾಲೇಜಿನ ಭಾಮಿನಿ ಕೆ ಭಟ್ ರಾಜ್ಯ ಮಟ್ಟದಲ್ಲಿ ಹತ್ತನೇ ರ್‍ಯಾಂಕ್ ಗಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಮತ್ತು ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ಬಿ.ಸಿ.ರೋಡ್ ನಲ್ಲಿ ನಡೆದ ಕರಾವಳಿ ಕಲೋತ್ಸವದ ನಾಟಕ ಸ್ಫರ್ಧೆಯಲ್ಲಿ ವಿದ್ಯಾರ್ಥಿನಿ ಸುರಕ್ಷಾ ಶೆಟ್ಟಿ ಅತ್ಯುತ್ತಮ ನಾಯಕನಟಿ ಪ್ರಶಸ್ತಿಯನ್ನು ಗಳಿಸಿದ್ದಾರೆ.
ಎಸ್.ವಿ.ಎಸ್ ಕಾಲೇಜು ಬಂಟ್ವಾಳದಲ್ಲಿ ನಡೆದ ’ವಿಕಾಸ್-೨೦೧೯’ ಇದರಲ್ಲಿ ನಾಟಕ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳ ತಂಡವು ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ.
ಶಾರದಾ ಕಾಲೇಜು ಆಯೋಜಿಸಿದ ’ಶಾರದಾ ಮಹೋತ್ಸವ’ದ ಸಿಂಚನಾಲಕ್ಷ್ಮೀ ಇವರು ಶಾಸ್ತ್ರೀಯ ಸಂಗೀತದಲ್ಲಿ ತೃತೀಯ ಬಹುಮಾನವನ್ನು, ಸಂಸ್ಕೃತ ರಸಪ್ರಶ್ನೆಯಲ್ಲಿ ಕೌಸ್ತುಭ ಮತ್ತು ಗುರುನಂದನ್ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ.
ವಿವೇಕಾನಂದ ಕನ್ನಡ ಮಾಧ್ಯಮದಲ್ಲಿ ನಡೆದ ಜಿಲ್ಲಾ ಮಟ್ಟದ ವಿದ್ಯಾಭಾರತಿ ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಅವನೀಶ್ ಕೆ, ಚಿನ್ಮಯ,ಶರಣ್ ಶೆಟ್ಟಿ, ಇವರು ಪ್ರಥಮ ಸ್ಥಾನವನ್ನು, ಗಣಿತ ಮಾದರಿ ತಯಾರಿಕೆಯಲ್ಲಿ ಶರಣ್ ಕೆ ವಿ ಇವರು ದ್ವಿತೀಯ ಸ್ಥಾನವನ್ನು ಮತ್ತು ಸುಕ್ಷೇಮ, ಜಿ ಪಿ ಇವರು ತೃತೀಯ ಸ್ಥಾನವನ್ನು , ಆಶುಭಾಷಣ ಸ್ಪರ್ಧೆಯಲ್ಲಿ ರಕ್ಷಿತಾ ಇವರು ತೃತೀಯ ಸ್ಥಾನವನ್ನು ಮತ್ತು ಪೃಥಾ ಆರ್ ರೈ ಇವರು ಪ್ರಥಮ ಸ್ಥಾನವನ್ನು ಪಿಪಿಟಿ ಪ್ರೆಸೆಂಟೆಶನ್‌ನಲ್ಲಿ ಗಳಿಸಿರುತತ್ತಾರೆ.
ಎಸ್. ವಿ. ಎಸ್ ಕಾಲೇಜು, ಬಂಟ್ವಾಳದಲ್ಲಿ ನಡೆದ Science- Vista -2019ರ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಅನೀಶ್ ಕೃಷ್ಣ ಮತ್ತು ಲವಿನ್ ಎ ಪಿ ಇವರು ಪ್ರಥಮ ಸ್ಥಾನವನ್ನು ವಿಜ್ಞಾನ ರಂಗೋಲಿಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಮೇಘಾ ಮತ್ತು ಕವನ ದ್ವಿತೀಯ ಬಹುಮಾನವನ್ನು ಕೋಲಾಜ್‌ನಲ್ಲಿ ಸುರಕ್ಷಾ ಮತ್ತು ಸಾಧನ ಇವರು ದ್ವಿತೀಯ ಬಹುಮಾನವನ್ನು ಪಡೆದಿದ್ದಾರೆ.
ಅದೇ ರೀತಿ ಮಹಾಲಸ Visual Art ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಗೌತಮ್ ಇವರು ದ್ವಿತೀಯ ಬಹುಮಾನವನ್ನು ಪಡೆದಿದ್ದಾರೆ.
ರೇಡಿಯೋ ಪಾಂಚಜನ್ಯ:
ಮಾತೃ ಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ ಕಾಲೇಜಿನ ಕ್ಯಾಂಪಸ್ ನಲ್ಲೇ ಸ್ಥಾಪಿಸಿರುವ ರೇಡಿಯೋ ಪಾಂಚಜನ್ಯ 90.8 ಸಮುದಾಯ ಬಾನುಲಿ ಕೇಂದ್ರದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನೇತೃತ್ವದಲ್ಲಿ ಪುಸ್ತಕ ಪರಿಚಯ, ಸಣ್ಣಕಥೆ, ಕವಿತೆ, ಪ್ರಬಂಧ, ಲೇಖನ, ಭಾಷಣ, ಹಾಡು, ಜಾನಪದ ಗೀತೆ, ಭಕ್ತಿಗೀತೆ, ಕಗ್ಗ ಮತ್ತು ವ್ಯಾಖ್ಯಾನ, ಅಡುಗೆ ವಿಶೇಷ, ಯಕ್ಷಗಾನ ತಾಳ ಮದ್ದಳೆ, ಪುರಾಣ ಕಥಾಮೃತ, ಪುರಾಣಲೋಕದ ಮಹಾಪುರುಷರು, ಹರಟೆ, ನುಡಿದೀಪ, ಕನ್ನಡ ಬರಹಗಾರರ ಬದುಕು ಬರಹ, ಸ್ಥಳ ಪರಿಚಯ, ಸಂದರ್ಶನ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಹಾಡುವಿಕೆ, ಭಾಷಣ, ಭಜನೆಗಳು ಮೊದಲಾದ ಕಾರ್‍ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರಪಂಚದಾದ್ಯಂತ ಪಸರಿಸುತ್ತಿದೆ.
ಹಾಗೆಯೇ ವಿದ್ಯಾವರ್ಧಕ ಸಂಘ ರೂಪಿಸಿರುವ ಯಶಸ್ ಸಂಸ್ಥೆಯು ಆವರಣದಲ್ಲೇ ಇದ್ದು ಐ. ಎ. ಎಸ್ ,ಐ.ಪಿ.ಎಸ್ ನಂತಹ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡುತ್ತಿದೆ.
ಕ್ರೀಡೆಯಲ್ಲಿ ವಿಶಿಷ್ಠ ಸಾಧನೆ:
ವಿಶಾಲವಾದ ಕ್ರೀಡಾಂಗಣವನ್ನು ಹೊಂದಿರುವ ಕಾಲೇಜು ತನ್ನ ಆರಂಭದ ದಿನಗಳಿಂದಲೂ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದು ಹಲವಾರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನೀಡಿದ ಕೀರ್ತಿಗೆ ಭಾಜನವಾಗಿದೆ. ಕ್ರೀಡೆಯಲ್ಲಿ ಆಸಕ್ತಿಯಿರುವ ಹಾಗೂ ಸಾಧನೆಯ ಛಲ ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷವಾದ ತರಬೇತಿಗಳನ್ನು ನೀಡುವುದರ ಜೊತೆಗೆ ಸಾಧನೆಗೆ ಪೂರಕವಾದ ವಾತವರಣವನ್ನು ಕಲ್ಪಿಸಿಕೊಟ್ಟು ವಿದ್ಯಾರ್ಥಿಗಳಿಗೆ ನಿರಂತರ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಇಂತಹ ಪ್ರೋತ್ಸಾಹದ ಫಲವಾಗಿ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾಕ್ಷೇತ್ರದಲ್ಲಿ ಅದ್ಬುತ ಸಾಧನೆಗೈದು ಸಂಸ್ಥೆಯ ಕೀರ್ತಿಯನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನೆಲೆಗೊಳ್ಳವಂತೆ ಮಾಡಿದ್ದಾರೆ.
ಮಧ್ಯಪ್ರದೇಶದ ಉಜ್ಜೈನಿಯಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಧನುಷ್ ಬಂಗಾರದ ಪದಕವನ್ನು ಗಳಿಸಿದ್ದಾರೆ. ಇವರು ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ಅಖಿಲ ಭಾರತ ಮಟ್ಟದ SGFI ಪಂದ್ಯಾವಳಿಗೆ ಪಿಯು ವಿಭಾಗದಲ್ಲಿ ಕರ್ನಾಟಕದಿಂದ ಆಯ್ಕೆಗೊಂಡು ರಾಜ್ಯವನ್ನು ಪ್ರತಿನಿಧಿಸಿದ್ದಾರೆ.
ದ್ವಿತೀಯ ವಾಣಿಜ್ಯ ವಿಭಾಗದ ಆನಂದ ಜಿ ಪ್ರಭು ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಸುಳ್ಯದ ನೆಹರು ಮೆಮೊರಿಯಲ್ ಪ. ಪೂ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪುತ್ತೂರು ತಾಲೂಕು ತಂಡವನ್ನು ಪ್ರತಿನಿಧಿಸಿ, ಪ್ರಥಮ ಸ್ಥಾನ. ಅದೇ ರಿತಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ದಾರವಾಡದಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಿ, ಪ್ರಥಮ ಸ್ಥಾನ. ಜ್ಞಾನ ದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾ ಗಳಿಸಿರುತ್ತಾರೆ. ವಿದ್ಯಾಭಾರತಿ ಪ್ರಾಂತ ಹಾಗೂ ಕ್ಷೇತ್ರ ಮಟ್ಟದ ಕಬಡ್ಡಿ ಪಂದ್ಯಾಟ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದು, ಪ್ರಾಂತ ಮಟ್ಟದ ಕಬಡ್ಡಿಯಲ್ಲಿ ಪ್ರಥಮ ಸ್ಥಾನ, ಕ್ಷೇತ್ರ ಮಟ್ಟದ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ ವನ್ನು ಗಳಿಸಿದ್ದಾರೆ.
ಹಾಗೆಯೇ ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಸಂತ ಜಾರ್ಚ್ ಪ ಪೂ ಕಾಲೇಜು ನೆಲ್ಯಾಡಿ ಇಲ್ಲಿ ನಡೆದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ. ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಎಲ್.ಸಿ.ಆರ್ ಪ ಪೂ ಕಾಲೇಜು ಕಕ್ಕೆಪದವು ಇಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿರುತ್ತಾರೆ.
ಪ್ರಥಮ ವಿಜ್ಞಾನ ವಿಬಾಗದ ಹೃತಿಕ್ ಎಂ , ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಸರಕಾರಿ ಪ ಪೂ ಕಾಲೇಜು ಕೆಯ್ಯೂರು ಇಲ್ಲಿ ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ. ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಸರಕಾರಿ ಪ ಪೂ ಕಾಲೇಜು ಕುಂಬ್ರ ಇಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ತಾಲೂಕು ತಂಡವನ್ನು ಪ್ರತಿನಿಧಿಸಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಿ, ಪ್ರಥಮ ಸ್ಥಾನ ಗಳಿಸಿದ್ದಾರೆ. ಶಾರದ ವಿದ್ಯಾಲಯ ಮಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ. ಬಿಹಾರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.
ಈ ಮೂಲಕ ವಿವೇಕಾನಂದ ವಿದ್ಯಾ ಸಂಸ್ಥೆ ಕ್ರೀಡಾಕಲಿಗಳನ್ನು ಉತ್ಪತ್ತಿ ಮಾಡುವ ಕೇಂದ್ರವೆನಿಸಿದೆ.
ವಿಭಾಗಗಳು:
ವಿಜ್ಞಾನ ವಿಭಾಗ : (ಪಿ.ಸಿ.ಎಂ.ಬಿ /ಪಿ.ಸಿ.ಎಂ.ಸಿ /ಪಿ.ಸಿ.ಎಂ.ಎಸ್ /ಪಿ.ಸಿ.ಎಂ.ಇ )
(ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಬಯೋಲಜಿ, ಕಂಪ್ಯೂಟರ್ ವಿಜ್ಞಾನ , ಇಲೆಕ್ಟ್ರಾನಿಕ್ಸ್)
ವಾಣಿಜ್ಯ ವಿಭಾಗ: (ಎಸ್.ಇ.ಬಿ.ಎ / ಎಸ್.ಸಿ.ಬಿ.ಎ /ಇ.ಸಿ.ಬಿ.ಎ )
(ಇತಿಹಾಸ, ಆರ್ಥಿಕ ಗಣಿತಶಾಸ್ತ್ರ, ವ್ಯಾಪರ ಶಿಕ್ಷಣ, ಕಂಪ್ಯೂಟರ್)
ಕಲಾ ವಿಭಾಗ : (ಎಚ್.ಇ.ಪಿ.ಎಸ್ )
(ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ, ಸಮಾಜಶಾಸ್ತ್ರ)
ಭಾಷೆಗಳು: ಇಂಗ್ಲೀಷ್, ಕನ್ನಡ, ಹಿಂದಿ, ಸಂಸ್ಕ್ರತ
ವೈಶಿಷ್ಟ್ಯಗಳು:
ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ನಾಲ್ಕು ಅಂತಸ್ತಿನ ೪೦ ಕೊಠಡಿಗಳಿರುವ ನೂತನ ಸುಸಜ್ಜಿತಕಟ್ಟಡವನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಸ್ವತಂತ್ರವಾಗಿ ಪ್ರಯೋಗಜ್ಞಾನ ಬೆಳೆಸುವ ದೃಷ್ಟಿಯಿಂದ ಏಕಕಾಲದಲ್ಲಿ ನೂರು ವಿದ್ಯಾರ್ಥಿಗಳಿಗೆ ಪ್ರಯೋಗ ಮಾಡಲು ಅವಕಾಶವಿರುವ ಜೀವಶಾಸ್ತ್ರ, ಗಣಕ ವಿಜ್ಞಾನ, ರಸಾಯನಶಾಸ್ತ್ರ, ಭೌತಶಾಸ್ತ್ರದ ಪ್ರಯೋಗಾಲಯಗಳನ್ನು ನಿರ್ಮಿಸಲಾಗಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಅನುವಾಗುವಂತೆ ೭೦೦ ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದಾದ ಸಭಾಭವನ, ಮಾಹಿತಿ ತಂತ್ರಜ್ಞಾನದ ಉಪಯೋಗ ಪಡೆಯುವಂತೆ ಮಾಡಲು ಎಲ್.ಸಿ.ಡಿ ಪ್ರೊಜೆಕ್ಟರ್ ಇರುವ ಇ- ಕ್ಲಾಸ್ ರೂಮ್‌ನ ವ್ಯವಸ್ಥೆ, ೫೨,೦೦೦ ಪುಸ್ತಕಗಳನ್ನೂ ೧೫೦ ವಿವಿಧ ವಿಷಯಗಳನ್ನೊಳಗೊಂಡ ನಿಯತಕಾಲಿಕಗಳು ಮತ್ತು ೧೬ ವಿವಿಧ ಭಾಷೆಯ ದಿನಪತ್ರಿಕೆಗಳನ್ನೊಳಗೊಂಡು ತಮಗೆ ಬೇಕಾದ ಪುಸ್ತಕಗಳನ್ನು ತಾವೇ ಆರಿಸುವ ಸೌಕರ್ಯವುಳ್ಳ ವಿಸ್ತಾರವಾದ ಗ್ರಂಥಾಲಯವನ್ನು ನಿರ್ಮಿಸಲಾಗಿದೆ. ಭಾಷಾ, ವಾಣಿಜ್ಯ, ಜೀವಶಾಸ್ತ್ರ ಮತ್ತುಗಣಿತ ಶಾಸ್ತ್ರದ ವಿಭಾಗಗಳು ಇದರ ಜೊತೆಗೆ ಸೇರಿಕೊಂಡಿವೆ. ಕನಿಷ್ಠ ಶುಲ್ಕ, ಗರಿಷ್ಠ ಸವಲತ್ತುಗಳು ,ವಿಶಾಲವಾದ ತರಗತಿ ಕೊಠಡಿಗಳು, ದೃಶ್ಯ-ಶ್ರವಣ ಬೋಧನೋಪಕರಣಗಳು, ಎಲ್ಲ ಕೊಠಡಿಗಳಲ್ಲಿಯೂ ಸಿಸಿ ಕೆಮರಾಗಳು, ಗ್ರಾಮೀಣ ಪ್ರದೇಶಗಳಿಂದ ಶಾಲಾ ವಾಹನದ ವ್ಯವಸ್ಥೆ, ಪಠ್ಯೇತರ ಚಟುವಟಕೆ ಕಬ್ಲ್‌ಗಳು ಕ್ರೀಡಾಕೂಟಗಳು ಕಾಲೇಜಿನ ವೈಶಿಷ್ಟ್ಯಗಳಾಗಿವೆ.
ಹಾಸ್ಟೆಲ್ ವ್ಯವಸ್ಥೆ:
ದೂರದ ವಿದ್ಯಾರ್ಥಿಗಳಿಗಾಗಿ ಹುಡುಗ-ಹುಡುಗಿಯರಿಗೆ ಪ್ರತ್ಯೇಕವಾದ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿಶಾಲವಾದ ಪ್ರತ್ಯೇಕ ತರಗತಿಗಳನ್ನು ಹೊಂದಿದ ಅತ್ಯಾಧುನಿಕ ಸೌಕರ್‍ಯಗಳನ್ನೊಳಗೊಂಡ ಸುಸಜ್ಜಿತ ಕಟ್ಟಡವನ್ನು ಸಂಸ್ಥೆ ಹೊಂದಿದೆ. ಕಲಿಕಾ ನ್ಯೂನತಗಳಿರುವ ವಿದ್ಯಾರ್ಥಿಗಳ ಕುರಿತು ವಿಶೇಷ ನಿಗಾ ವಹಿಸಿ ಕಲಿಕಾ ವಿಧಾನಗಳನ್ನು ಅನುಸರಿಸಿ ಭೋದಿಸಲಾಗುತ್ತದೆ.
ಎನ್. ಸಿ.ಸಿ ವಿಭಾಗ:
ದೇಶಪ್ರೇಮವನ್ನು ಬೆಳೆಸುವುದರೊಂದಿಗೆ ಸೈನಿಕ ಶಿಕ್ಷಣವನ್ನು ಪಡೆಯುವುದಕ್ಕಾಗಿ N.C.C. ವಿಭಾಗವು ಸಕ್ರಿಯವಾಗಿ ಕಾರ್ಯಾಚರಿಸುತ್ತಿದ್ದು ಶಿಸ್ತು, ಸಂಯಮ ಮತ್ತು ಕ್ರಿಯಾಶೀಲತೆಯ ಪಾಠವನ್ನು ಹೇಳಿಕೊಡುತ್ತದೆ. ಹೆತ್ತವರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುವ ಶಿಕ್ಷಕ-ರಕ್ಷಕ ಸಂಘವು ಹೆತ್ತವರನ್ನು ತನ್ನ ಕಾರ್ಯಗಳಲ್ಲಿ ಸಹಭಾಗಿಯಾಗುವಂತೆ ಮಾಡಿ ಕಾಲೇಜಿನ ಅಭಿವೃದ್ಧಿಯ ಕಡೆ ಕೈಜೋಡಿಸುವ ಅವಕಾಶವನ್ನು ನೀಡುತ್ತದೆ.
ಕಲಿಕೆ, ಕ್ರೀಡೆ, ಸಾಹಿತ್ಯಕ-ಸಾಂಸ್ಕೃತಿಕ ರಂಗಗಳಲ್ಲಿ ನಿರಂತರ ಮುಂಚೂಣಿಯಲ್ಲಿರುವ ವಿವೇಕಾನಂದ ಪದವಿಪೂರ್ವ ಕಾಲೇಜು ಕಾಲದ ಅಗತ್ಯಗಳಿಗೆ ತಕ್ಕ ಶಿಕ್ಷಣ ನೀಡುವ ಸಮಗ್ರ ಚಿಂತನೆಯ ಪರಿಪೂರ್ಣ ತಾಣ. ಪಾಠ, ಪ್ರವಚನ, ರ್‍ಯಾಂಕ್ ಗಳಿಕೆಗೆ ಸೀಮಿತವಾಗದೆ ಬದುಕಿನ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಲು ಬೇಕಾದ ಕೌಶಲವನ್ನು ರೂಢಿಸುವ, ವ್ಯಕ್ತಿತ್ವವನ್ನು ಅರಳಿಸುವ, ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳುವ ಸುಭದ್ರ ಪಂಚಾಂಗ ಇಲ್ಲಿನ ಶಿಕ್ಷಣ ಸ್ವರೂಪದಲ್ಲಿದೆ. ಇಲ್ಲಿ ದೊರಕುವ ಶಿಕ್ಷಣವು ಉತ್ತಮ ಬದುಕನ್ನು ಕಟ್ಟಿಕೊಳ್ಳಲು, ಉತ್ತಮ ನಾಗರಿಕರಾಗಿ ಬೆಳೆಯಲು ಬೇಕಾದ ಸುಸ್ಥಿರ, ವ್ಯವಸ್ಥಿತ ನೆಲೆಗಟ್ಟನ್ನು ಹಾಕಿಕೊಡುತ್ತವೆ. ಸದೃಢ ಹಾಗೂ ಮಾರ್ಗದರ್ಶಿತ್ವವುಳ್ಳ ಆಡಳಿತ ಮಂಡಳಿ, ಸಮರ್ಥ ಪ್ರಾಂಶುಪಾಲರು, ಉತ್ಕೃಷ್ಟ ಶಿಕ್ಷಕರು, ಅತ್ಯುತ್ತಮ ವ್ಯವಸ್ಥೆಯಿಂದ ಕೂಡಿದ ವಿವೇಕಾನಂದ ಪದವಿಪೂರ್ವ ಕಾಲೇಜು ಶಿಕ್ಷಣ ಪ್ರೇಮಿಗಳ ನೆಚ್ಚಿನ ತಾಣವೆನಿಸಿದೆ. ಹಾಗಾಗಿಯೇ ಜಿಲ್ಲೆ ಮಾತ್ರವಲ್ಲದೇ ರಾಜ್ಯ ಮತ್ತು ರಾಷ್ಟ್ರದ ವಿವಿಧ ಭಾಗಗಳಿಂದ ಈ ಕಾಲೇಜನ್ನು ಅರಸಿ ಆಗಮಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ವೆಬ್‌ಸೈಟ್ www.vcpuc.vivekanandaedu.orgಅಥವಾ[email protected] ಅಥವಾ ಮೊಬೈಲ್ ಸಂಖ್ಯೆ: 9449259330, 08251-237455 ನ್ನು ಸಂರ್ಪಕಿಸಬಹುದು.
ವಿವೇಕಾನಂದ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ.ನೈತಿಕ ವಿಚಾರಗಳನ್ನು ಮೈಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಆದರ್ಶ, ಸಂಸ್ಕಾರ ಮತ್ತುರಾಷ್ಟ್ರಭಕ್ತಿಯನ್ನು ಪ್ರೇರೇಪಿಸುವ ಮೂಲಕ ವಿದ್ಯಾರ್ಥಿಗಳ ಉನ್ನತಿಗೆ ಸಹಾಯ ಮಾಡುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಹೇಳಿದ್ದಾರೆ