Sunday, May 5, 2024
spot_imgspot_img
spot_imgspot_img

ಬಂಟ್ವಾಳ : (ಎ.1-ಎ.23) ಕಡೆಶೀವಾಲಯ ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

- Advertisement -G L Acharya panikkar
- Advertisement -

ಬಂಟ್ವಾಳ : ಕಡೆಶೀವಾಲಯ ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಎ.1 ರಿಂದ ಎ.23 ರ ವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯಲಿದೆ.

ಎ.1ನೇ ಶನಿವಾರ ಗೊನೆ ಮುಹೂರ್ತದಿಂದ ನಡೆಯಿತು. ಎ.9ರಂದು ಧ್ವಜಾರೋಹಣಗೊಂಡು ಎ.23ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವ ನಡೆಯಲಿದೆ.

ಎ.16 ರಂದು ಬೆಳಿಗ್ಗೆ ಗಂಟೆ 7 ರಿಂದ ಉತ್ಸವ, ಮಧ್ಯಾಹ್ನ ಮಹಾಪೂಜೆ ನಡೆಯಿತು. ರಾತ್ರಿ ಗಂಟೆ 6ರಿಂದ ಉತ್ಸವ ನಡೆಯಲಿದೆ.
ಎ. 17 ರಂದು ಬೆಳಿಗ್ಗೆ ಗಂಟೆ 8 ರಿಂದ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಗಂಟೆ 6 ರಿಂದ ಉತ್ಸವ, ಬಿದಿ ಸವಾರಿ, ಕಟ್ಟೆಪೂಜೆ ನಡೆಯಲಿದೆ.
ಎ. 18 ರಂದು ಮಧ್ಯಾಹ್ನ ಮಹಾಪೂಜೆ, ರಾತ್ರಿ ಗಂಟೆ 6 ರಿಂದ ಉತ್ಸವ, ಕಟ್ಟೆಪೂಜೆ ನಡೆಯಲಿದೆ.
ಎ.19 ರಂದು ಮಧ್ಯಾಹ್ನ ಮಹಾಪೂಜೆ ರಾತ್ರಿ ಚಂದ್ರಮಂಡಲ ಉತ್ಸವ, ಅನ್ನಸಂತರ್ಪಣೆ ನಡೆಯಲಿದೆ.
ಎ.20 ರಂದು ಮಧ್ಯಾಹ್ನ ಪಲ್ಲಪೂಜೆ, ಮಹಾಪೂಜೆ, ರಾತ್ರಿ ಗಂಟೆ 8 ಕ್ಕೆ ಮಹಾರಥೋತ್ಸವ, ಸುಡುಮದ್ದು ಪ್ರದರ್ಶನ, ಮಹಾಪೂಜೆ, ಕವಾಟ ಬಂಧನ, ಮಹಾಅನ್ನಸಂತರ್ಪಣೆ ನಡೆಯಲಿದೆ.
ಎ. 21 ರಂದು ಬೆಳಿಗ್ಗೆ ಗಂಟೆ 7.25 ಕ್ಕೆ ಕವಾಟೋದ್ಘಾಟನೆ, ತುಲಾಭಾರ ಸೇವೆಗಳು, ಮಧ್ಯಾಹ್ನ ಮಹಾಪೂಜೆ, ಸಂಜೆ ಗಂಟೆ 6 ರಿಂದ ಉತ್ಸವ, ಕಟ್ಟೆಪೂಜೆ, ಅನ್ನಸಂತರ್ಪಣೆ, ಅವಭೃತ ಸ್ನಾನ, ಧ್ವಜಾವರೋಹಣ ನಡೆಯಲಿದೆ.
ಎ.22 ರಂದು ರಾತ್ರಿ ಮಹಾಪೂಜೆ, ಶ್ರೀ ನಾರಾಳ್ತಾಯ ಮತ್ತು ಇತರ ದೈವಗಳ ನೇಮೋತ್ಸವ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಎ.23 ರಂದು ಮಧ್ಯಾಹ್ನ ಸಂಪ್ರೋಕ್ಷಣೆ, ಮಹಾಪೂಜೆ, ರಾತ್ರಿ ಗಂಟೆ 8 ಕ್ಕೆ ಮಂಗಲ, ಮಂತ್ರಾಕ್ಷತೆ ನಡೆಯಲಿದೆ.

ದಿನಾಂಕ 19-4-2023ನೇ ಬುಧವಾರ ರಾತ್ರಿ ಗಂಟೆ 8 ರಿಂದ ಪ್ರಥಮ ಪ್ರಶಸ್ತಿ ವಿಜೇತ, CPL ಖ್ಯಾತಿಯ ಹಾಗೂ ಬಲೆ ತೆಲಿಪಾಲೆ ಖ್ಯಾತಿಯ ವೈಷ್ಣವಿ ಕಲಾವಿದೆರ್, ಕೊಯಿಲ ಇವರಿಂದ “ಕುಸಲ್ದ ಗೌಜಿ” ನಡೆಯಲಿದೆ.
ದಿನಾಂಕ 20-4-2023ನೇ ಗುರುವಾರ ರಾತ್ರಿ ಗಂಟೆ 9 ರಿಂದ ಯುವಶಕ್ತಿ ಕಡೇಶಿವಾಲಯ(ರಿ) ಅರ್ಪಿಸುವ 12 ನೇ ವರ್ಷದ ಕಲಾಕಾಣಿಕೆ ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರಿಂದ ಯಕ್ಷಗಾನ ಬಯಲಾಟ “ಶ್ರೀ ಭಗವತಿ ಕ್ಷೇತ್ರ ಮಹಾತ್ಮೆ” ನಡೆಯಲಿದೆ.
ದಿನಾಂಕ 21-4-2023ನೇ ಶುಕ್ರವಾರ ರಾತ್ರಿ ಗಂಟೆ 8 ರಿಂದ ಶ್ರೀ ವನದುರ್ಗಾ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ದೇಂತಡ್ಕ ಇವರಿಂದ ಯಕ್ಷಗಾನ ಬಯಲಾಟ “ಚಂದ್ರಾವಳಿ ವಿಲಾಸ” ಪೌರಾಣಿಕ ಪ್ರಸಂಗ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!