Saturday, April 20, 2024
spot_imgspot_img
spot_imgspot_img

ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಕನಸುಗಳು-2020 ಕಾರ್ಯಕ್ರಮ, ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗಾಗಿ ವಿವಿಧ ರೀತಿಯ ಸ್ಫರ್ಧೆಗಳು

- Advertisement -G L Acharya panikkar
- Advertisement -

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ಅದ್ಭುತ ಕನಸುಗಳ ಆಗರ. ಅವನ ಅಂತರಂಗದಲ್ಲಿ ಹರಿಯುವ ಕನಸುಗಳ ಶಕ್ತಿ ಸಾಮರ್ಥ್ಯಗಳು ಅಪಾರ. ಅದರ ಸಾಕ್ಷಾತ್ಕಾರಕ್ಕಾಗಿ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ತುಂಬುವ ಕೆಲಸ ಮತ್ತು ಅವಕಾಶಗಳು ಎಲ್ಲಿ ಇದೆ ಎಂದು ಅರಿತು ಅದರ ಸದುಪಯೋಗದೊಂದಿಗೆ ಅಲ್ಲಿ ಬದುಕು ಕಟ್ಟಿಕೊಳ್ಳುವ ಅವಕಾಶವನ್ನು ವಿವೇಕಾನಂದ ಪದವಿಪೂರ್ವ ಕಾಲೇಜು ಕನಸುಗಳು-2020 ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡುತ್ತಿದೆ.

nu

ಕೊರೋನದ ನಡುವೆ ಪರೀಕ್ಷೆ ಗೆದ್ದು ಬಂದ 2019-20 ನೇ ಸಾಲಿನ ಹತ್ತನೇ ತರಗತಿಯ ಮತ್ತು ಕೊರೋನದ ನಡುವೆ ಶಾಲೆಗೆ ಹೋಗಲು ಕಾತರದಲ್ಲಿ ಕಾಯುತ್ತಿರುವ 2020-21 ಸಾಲಿನ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗಾಗಿ ಕನಸುಗಳು-2020 ಕಾರ್ಯಕ್ರಮದ ಪ್ರಯುಕ್ತ ವಿವಿಧ ರೀತಿಯ ಸ್ಫರ್ಧೆಗಳನ್ನು ಆಯೋಜಿಸಲಾಗಿದೆ. ಕೊರೋನಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಇಂತಹ ಪೂರಕ ಕೆಲಸಗಳಲ್ಲಿ ತೊಡಗಿಸಿಕೊಂಡು ಅವರ ಸುಂದರ ಬದುಕಿಗೆ ಭದ್ರ ಬುನಾದಿಯನ್ನು ಕಲ್ಪಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶ.

ವಿಜ್ಞಾನ ಸ್ತಬ್ಧ ಮಾದರಿ ರಚನೆ, ಯುವ ವೈದ್ಯರು, ಕನ್ನಡ ಯುವ ಪತ್ರಕರ್ತ, ತುಳು ಒಗಟುವಿಗೆ ಉತ್ತರ, ಮೇಧಾವಿ, ಜನರಲ್ ಕ್ವಿಜ್, ಚರ್ಚಾ ಸ್ಫರ್ಧೆ, ಪ್ರಾಕೃತಿಕ ರಂಗೋಲಿ, ವರ್ಣ ಚಿತ್ರ ರಚನೆ, ಪೆನ್ಸಿಲ್ ಆರ್ಟ್ , ಶಾಸ್ತ್ರೀಯ ಸಂಗೀತ ಗಾಯನ, ಯಕ್ಷಗಾನ ಭಾಗವತಿಕೆ ಸ್ಫರ್ಧೆ, ಯಕ್ಷಗಾನ ಅರ್ಥಗಾರಿಕೆ ಸ್ಫರ್ಧೆ, ಕನ್ನಡ ಕವನ ರಚನೆ, ಜನಪದ ಗಾಯನ ರಚನೆ ಹೀಗೆ ಒಟ್ಟು 15 ವಿವಿಧ ರೀತಿಯ ಸ್ಫರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ ನಿಯೋಜಿಸಲಾಗಿದೆ. ಸ್ಪರ್ಧೆಯು ಜುಲೈ 24 ರಿಂದ ಅಗಸ್ಟ್ 7 ರವರೆಗೆ ನಡೆಯಲಿದೆ.

ಈ ಸ್ಫರ್ಧೆಗಳಿಗೆ ಯಾವುದೇ ರೀತಿಯ ಪ್ರವೇಶ ಶುಲ್ಕವಿರುವುದಿಲ್ಲ ಮತ್ತು ಎಲ್ಲವೂ ಉಚಿತವಾಗಿರುತ್ತದೆ. ಹೆಚ್ಚಿನ ಸ್ಫರ್ಧೆಗಳು ವಾಟ್ಸಪ್ ಮೂಲಕ ಮತ್ತು ಕೆಲವು ಸ್ಫರ್ಧೆಗಳು ಆನ್‌ಲೈನ್ ಮೂಲಕ ನಡೆಯುವ ಕಾರಣ ಗೂಗಲ್‌ಮೀಟ್ ಆಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗಬಹುದು. ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನವಿರುತ್ತದೆ. ಆಸಕ್ತ ವಿದ್ಯಾರ್ಥಿಗಳು ಜುಲೈ 22 ರ ಮೊದಲು ತಮ್ಮ ವಾಟ್ಸಾಪ್ ದೂರವಾಣಿ ಸಂಖ್ಯೆಯನ್ನು 9902194905, 9731640407 ಅಥವಾ 9742001857 ದೂರವಾಣಿ ಸಂಖ್ಯೆಗಳಲ್ಲಿ ನೋಂದಾವಣಿ ಮಾಡಿಕೊಂಡು ಇಂತಹ ಸ್ಫರ್ಧೆಗಳಲ್ಲಿ ಭಾಗವಹಿಸಬಹುದು.

ಪ್ರತಿಯೊಂದು ಸ್ಫರ್ಧೆಯಲ್ಲಿಯೂ ವಿದ್ಯಾರ್ಥಿಗಳು ಕೋವಿಡ್-19 ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಈ ಸಂದಿಗ್ಧ ಸಮಯದಲ್ಲಿ ಮಾನಸಿಕ ತೋಳಲಾಟವನ್ನು ಹೋಗಲಾಡಿಸಲು ವಿದ್ಯಾರ್ಥಿಗಳು ಇಂತಹ ಸ್ಫರ್ಧೆಗಳಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಂಡು ತಮ್ಮ ಕನಸನ್ನು ನನಸಾಗಿಸಿಕೊಳ್ಳಬೇಕೆಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!