Sunday, June 29, 2025
spot_imgspot_img
spot_imgspot_img

ವಿಟ್ಲದಾದ್ಯಂತ ಬಿರುಸಿನ ಮತದಾನ; ವಿವಿಧ ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ

- Advertisement -
- Advertisement -

ವಿಟ್ಲ: ಏಕಕಾಲದಲ್ಲಿ ನಡೆಯುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಬಿರುಸಿನಿಂದ ನಡೆಯುತ್ತಿದೆ. ವಿಟ್ಲದ ಸರ್ಕಾರಿ ಪ್ರೌಢ ಶಾಲೆ, ವಿಠ್ಠಲ ಪದವಿ ಪೂರ್ವ ಕಾಲೇಜು, ಒಕ್ಕೆತ್ತೂರು ಶಾಲೆ, ಸೈಂಟ್ ರೀಟಾ ಶಾಲೆ, ಬೊಬ್ಬೆಕೇರಿ ಪ್ರಥಮ ದರ್ಜೆ ಕಾಲೇಜು, ಮೇಗಿನಪೇಟೆ ಸರ್ಕಾರಿ ಶಾಲೆ ಸೇರಿದಂತೆ ಮೊದಲಾದ ಕಡೆಗಳಲ್ಲಿ ಮತದಾನ ನಡೆಯುತ್ತಿದೆ.

ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ 13.33 % ಮತದಾನ ದಾಖಲಾಗಿದೆ. ಮತದಾನ ಕೇಂದ್ರದ ಸುತ್ತಮುತ್ತ ಕಾಂಗ್ರೆಸ್ ಬಿಜಿಪಿ, ಎಸ್‌ಡಿಪಿಐ, ಜೆಡಿಎಸ್, ಅರುಣ್ ಕುಮಾರ್‍ ಪುತ್ತಿಲ ಬೆಂಬಲಿಗರು ಬೂತ್ ತೆರೆದು ಮತದಾರರಿಗೆ ಸುಲಭ ಆಗುವಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗುತ್ತಿದೆ.

- Advertisement -

Related news

error: Content is protected !!