- Advertisement -
- Advertisement -


ಪುತ್ತೂರು; ಮೊದಲ ಬಾರಿಗೆ ತೀವ್ರ ಕುತೂಹಲ ಕೆರಳಿಸಿದ್ದ ಪುತ್ತೂರು ಟೌನ್ ಬ್ಯಾಂಕ್ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಭಾರತಿ ಜಯಭೇರಿ ಬಾರಿಸುವ ಮೂಲಕ ಬಂಡಾಯಕ್ಕೆ ಇಲ್ಲಿ ಆಸ್ಪದವಿಲ್ಲ ಎಂಬುವುದನ್ನು ಸಾಬೀತುಪಡಿಸಿದೆ.
ಟೌನ್‌ಬ್ಯಾಂಕ್ ನ ೫ ವರ್ಷಗಳ ನೂತನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಸಹಕಾರಭಾರತಿ ೧೨ ಸ್ಥಾನಗಳನ್ನು ಪಡೆದುಕೊಂಡು ಭರ್ಜರಿ ಗೆಲುವು ಸಾಧಿಸಿದೆ.ಕಾಂಗ್ರೆಸ್ ಬೆಂಬಲಿಗರು ಹಾಗೂ ಓರ್ವ ಸ್ವತಂತ್ರ ಅಭ್ಯರ್ಥಿ ಈ ಬಾರಿ ಕಣದಲ್ಲಿದ್ದರು. ಆದರೆ ಸಹಕಾರಭಾರತಿಯ ಅಭ್ಯರ್ಥಿಗಳ ಮುಂದೆ ಗೆಲುವು ಕಾಣಲು ಸಾಧ್ಯವಾಗಿಲ್ಲ.ಸಹಕಾರ ಭಾರತಿಯಿಂದ ಹಾಲಿ ಅಧ್ಯಕ್ಷ ಕಿಶೋರ್ ಕೊಳತ್ತಾಯ ಎನ್, ಚಂದ್ರಶೇಖರ ರಾವ್ ಬಪ್ಪಳಿಗೆ, ರಾಜು ಶೆಟ್ಟಿ, ರಾಮಚಂದ್ರ ಕಾಮತ್, ಶ್ರೀಧರ ಗೌಡ ಕೆ, ಶ್ರೀಧರ ಪಟ್ಲ, ಸುಜೀಂದ್ರ ಪ್ರಭು, ವೀಣಾ, ಸೀಮಾ ಎಂ.ಎ, ಗಣೇಶ್ ಕೌಕ್ರಾಡಿ, ಮಲ್ಲೇಶ್ ಕುಮಾರ್, ಕಿರಣ್ ಕುಮಾರ್ ರೈ ಅವರು ವಿಜಯಿಗಳಾಗಿದ್ದಾರೆ.
- Advertisement -