- Advertisement -
- Advertisement -
Vtv Impact STORY
ವಿಟ್ಲ:- ವಿಟ್ಲದಲ್ಲಿ ಪತ್ತೆಯಾಗಿದ್ದ ಪರ್ಸ್ ನ ವಾರೀಸುದಾರರು ಪತ್ತೆಯಾಗಿದ್ದು, ಪ್ರಕಟಣೆ ನೀಡಿದ ವ್ಯಕ್ತಿಯಿಂದ ತನ್ನ ಪರ್ಸ್ ಅನ್ನು ಪಡೆದು ಧನ್ಯವಾದ ಹೇಳಿದ್ದಾರೆ.ಮಂಗಳಪದವು ಪಾತ್ರತೋಟ ನಿವಾಸಿ ರಹೀಂ ಅವರಿಗೆ ಪರ್ಸ್ ಯೊಂದು ಸಿಕ್ಕಿತ್ತು. ಬಳಿಕ ಅವರು ವಿ ಟಿವಿ ಮೂಲಕ ಸಾರ್ವಜನಿಕರಿಗೆ ಪ್ರಕಟಣೆ ನೀಡಿದ್ದರು.
ವಿಟಿವಿ ವರದಿ ಬಿತ್ತರಿಸುತ್ತಿದ್ದಂತೆ ರಹೀಂ ಅವರಿಗೆ ಕರೆ ಮಾಡಿದ ಪರ್ಸ್ ನ ವಾರೀಸುದಾರ ಉಳ್ಳಾಲ ನಿವಾಸಿ ರಮಾಕಾಂತ್ ಭಟ್ ಅವರು ಗುರುತು ಹೇಳಿ ಪರ್ಸ್ ಪಡೆದುಕೊಂಡಿದ್ದಾರೆ. ರಮಾಕಾಂತ್ ಹಾಗೂ ರಹೀಂ ಅವರು ವಿಟಿವಿ ತಂಡಕ್ಕೆ ಅವರು ಧನ್ಯವಾದ ಹೇಳಿದ್ದಾರೆ.
- Advertisement -