- Advertisement -
- Advertisement -
ವಿಟ್ಲ: ಇಲ್ಲಿನ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ರಸ್ತೆ ಬದಿಯಲ್ಲಿ ಅಳವಡಿಸಿರುವ ಹೈಮ್ಯಾಕ್ಸ್ ಲೈಟ್ ಒಂದು ಕೆಟ್ಟುಹೋಗಿರುವುದರಿಂದ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿತ್ತು. ಪದೇ ಪದೇ ಸಮಸ್ಯೆ ಮರುಕಳಿಸುತ್ತಿರುವ ಬಗ್ಗೆ ಸಾರ್ವಜನಿಕರು ಪಟ್ಟಣ ಪಂಚಾಯತ್ ನ ಅಧಿಕಾರಿಗಳ ಗಮನಕ್ಕೆ ತಂದರಾದರೂ, ವಿದ್ಯುತ್ ದೀಪದ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ನೀಡಿದ್ದೇವೆ ಅವರು ಸರಿಪಡಿಸುತ್ತಾರೆ ಎನ್ನುವ ಹಾರಿಕೆಯ ಉತ್ತರ ನೀಡುತ್ತಿದ್ದರು.
ಈ ಬಗ್ಗೆ ವಿಟಿವಿ ವರದಿ ಪ್ರಕಟಿಸಿತ್ತು. ಬಳಿಕ ವರದಿ ಬಿತ್ತರಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಪಟ್ಟಣ ಪಂಚಾಯತ್ ಕೆಟ್ಟು ನಿಂತ ಹೈಮ್ಯಾಕ್ಸ್ ಲೈಟ್‌ನ್ನು ಸರಿಪಡಿಸಿದ್ದಾರೆ.
- Advertisement -