Wednesday, April 24, 2024
spot_imgspot_img
spot_imgspot_img

ವುಹಾನ್ ರಹಸ್ಯ ಬಯಲಿಗೆಳೆದ ಪತ್ರಕರ್ತೆಗೆ ಜೈಲು ಶಿಕ್ಷೆಯ ಭೀತಿ!!

- Advertisement -G L Acharya panikkar
- Advertisement -

ಬೀಜಿಂಗ್: ಮಹಾಮಾರಿ ಕೊರೋನಾದ ತವರೂರು ಎಂಬ ಕುಖ್ಯಾತಿ ಪಡೆದಿರುವ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಚೀನಾದ ಚಟುವಟಿಕೆಗಳನ್ನು ಹೊರ ಜಗತ್ತಿಗೆ ಪರಿಚಯಿಸಿದ ಪತ್ರಕರ್ತೆ ಝಾಂಗ್ ಝಾನ್ ಇದೀಗ ಜೈಲು ಶಿಕ್ಷೆಯ ಭೀತಿ ಎದುರಿಸುತ್ತಿದ್ದಾರೆ.

ಕನಿಷ್ಠ ಐದು ವರ್ಷಗಳ ಕಾಲ ಅವರನ್ನು ಶಿಕ್ಷಿಸಲು ಪ್ರಯತ್ನ ನಡೆದಿದೆ. ಮೇ ತಿಂಗಳಿನಿಂದ ಅವರನ್ನು ವುಹಾನ್ ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಗಲಭೆ ಮತ್ತು ಗಲಭೆಗೆ ಪ್ರಚೋದನೆ ನೀಡಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ಕೊರೋನಾ ವೈರಸ್ ಕುರಿತು ಅವರು ನೀಡಿದ್ದ ಹೇಳಿಕೆಗೆ ಚೀನಾ ಕೆಂಡಾಮಂಡಲವಾಗಿತ್ತು.

ವುಹಾನ್ ನಲ್ಲಿ ರೋಗ ದೃಢಪಟ್ಟಿದ್ದರೂ ಅದನ್ನು ಹೊರ ಜಗತ್ತಿಗೆ ತಿಳಿಸದೆ ಮುಚ್ಚಿಡಲು ಚೀನಾ ಪ್ರಯತ್ನ ನಡೆಸಿತ್ತು. ಚೀನಾದಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದರೆ ಅದನ್ನು ಹತ್ತಿಕ್ಕಲಾಗುತ್ತಿದೆ. ಈ ಹಿಂದೆ ಇದೇ ರೀತಿ ನಾಪತ್ತೆಯಾಗಿದ್ದ ಮೂವರು ಪತ್ರಕರ್ತರ ಪೈಕಿ ಒಬ್ಬ ಪತ್ರಕರ್ತ ಎಲ್ಲಿದ್ದಾನೆ ಎಂಬ ಬಗ್ಗೆ ಮಾಹಿತಿ ಇಲ್ಲ.

- Advertisement -

Related news

error: Content is protected !!