Friday, June 5, 2026
spot_imgspot_img
spot_imgspot_img

ನೀರಿನ ಪೈಪ್ ಹಾಕುವ ವಿಚಾರದಲ್ಲಿ ಪರಸ್ಪರ ಹೊಡೆದಾಟ

- Advertisement -
- Advertisement -

ಬೆಳ್ತಂಗಡಿ: ನೀರಿನ ಪೈಪ್ ಹಾಕುವ ವಿಚಾರದಲ್ಲಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಮಲವಂತಿಗೆ ಗ್ರಾಮದ ಹೊಳೆಕೆರೆ ಎಂಬಲ್ಲಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಆನಂದ ಗೌಡ ಎಂಬುವುದಾಗಿ ಗುರುತಿಸಲಾಗಿದೆ.

ಮಲವಂತಿಗೆ ಗ್ರಾಮದ ಹೊಳೆಕೆರೆಯ ಮೊಹನ ಯಾನೆ ಜಯಂತ, ಚಂದಪ್ಪ ಗೌಡ, ದಿನೇಶ್ ಗೌಡ ಎಂಬವರು ಹಲ್ಲೆ ಮಾಡಿರುವುದಾಗಿ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.

ಮೋಹನ ಯಾನೆ ಜಯಂತ ಗೌಡ ಎಂಬಾತನು ಆನಂದ ಗೌಡನ ಮನೆಯಾದ ಬೆಳ್ತಂಗಡಿ ತಾಲೂಕು ಮಲವಂತಿಗೆ ಗ್ರಾಮದ ಹೊಳೆಕೆರೆ ಎಂಬಲ್ಲಿ ರಸ್ತೆಯ ಬದಿಯಲ್ಲಿ ಅಳವಡಿಸಿದ ನೀರಿನ ಪೈಪನ್ನು ಮಣ್ಣಿನ ಒಳಗೆ ಹಾಕಲು ಪ್ರಯತ್ನಿಸಿದಾಗ ಆಕ್ಷೇಪಿಸಿದ್ದಕ್ಕೆ ತುಳು ಬಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಹಾರೆಯಿಂದ ಹಲ್ಲೆ ನಡೆಸಿ ಎಡ ಕೈ ಅಂಗೈ, ಬಲ ಕೈ, ಮೊಣ ಗಂಟಿನ ಕೆಳಗೆ ಹಾಗೂ ಬಲ ಕಣ್ಣಿನ ಕೆಳಗೆ ಸೀಳಿದ ಹಾಗೂ ರಕ್ತ ಗಾಯ ಮಾಡಿ ಜೀವ ಬೆದರಿಕೆ ಒಡ್ಡಿರುವುದಲ್ಲದೆ ಅಂಗಿಯನ್ನು ಹಿಡಿದು ಎಳೆದಾಡಿ ಕಾಲಿನಿಂದ ತುಳಿದು ಕೈಯಿಂದ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!