Thursday, May 2, 2024
spot_imgspot_img
spot_imgspot_img

Whatsappನಲ್ಲೂ ಬರಲಿದೆ ಎಡಿಟ್‌ ಆಯ್ಕೆ; ಶೀಘ್ರದಲ್ಲೆ ಮೊಬೈಲ್‌ಗೆ ಎಂಟ್ರಿ

- Advertisement -G L Acharya panikkar
- Advertisement -
vtv vitla

ವಾಟ್ಸ್‌ಆಯಪ್‌ ಮೆಟಾ ಕಂಪನಿಯು ಜನರಿಗೆ ಹೊಸ-ಹೊಸ ಅಪ್‌ಡೇಟ್‌ಗಳನ್ನು ಜನರಿಗೆ ನೀಡುತ್ತಿದೆ. ಈಗ ಹೊಸ ಅಪ್‌ಡೇಟ್‌ ಬರಲು ಸಿದ್ಧವಾಗಿದೆ. ಈ ಅಪ್‌ಡೇಟ್‌ನಲ್ಲಿ ನೀವು ಕಳುಹಿಸಿದ ಸಂದೇಶವನ್ನು ಎಡಿಟ್‌ ಮಾಡುವುದಕ್ಕೆ ಆಯ್ಕೆಯಿರಲಿದೆ.

ಟ್ವಿಟರ್‌ ಮೂರು ದೇಶಗಳಲ್ಲಿ ಈ ಸೌಲಭ್ಯವನ್ನು ಪರಿಚಯಿಸಿರುವ ಬೆನ್ನಲ್ಲೇ ವಾಟ್ಸ್‌ಆಯಪ್‌ ಕೂಡ ಇಂತಹ ಸೌಲಭ್ಯ ನೀಡಲು ಮುಂದಾಗಿದೆ.

ಯಾವುದೇ ಸಂದೇಶವನ್ನು ಕಳುಹಿಸಿ 15 ನಿಮಿಷಗಳೊಳಗೆ ಅದನ್ನು ಎಡಿಟ್‌ ಮಾಡಬಹುದು. ಎಡಿಟ್‌ ಮಾಡಿದಂತಹ ಸಂದೇಶದ ಟಿಕ್‌ ಮಾರ್ಕ್‌ ಪಕ್ಕದಲ್ಲಿ “edited” ಎಂದು ನಮೂದಾಗುತ್ತದೆ. ಈ ಅಪ್‌ಡೇಟ್‌ ಸದ್ಯ ಅಭಿವೃದ್ಧಿ ಹಂತದಲ್ಲಿದ್ದು, ಶೀಘ್ರವೇ ಮೊಬೈಲ್‌ಗ‌ಳಿಗೆ ಬರಲಿದೆ ಎಂದು WabetaInfo ಸಂಸ್ಥೆ ವರದಿ ಮಾಡಿದೆ.

ವಾಟ್ಸ್‌ಆಯಪ್‌ ಇತ್ತೀಚೆಗಷ್ಟೇ ಗುಂಪುಗಳ ಸದಸ್ಯರ ಗರಿಷ್ಠ ಮಟ್ಟವನ್ನು ದುಪ್ಪಟ್ಟು ಮಾಡಿತ್ತು.

- Advertisement -

Related news

error: Content is protected !!