Saturday, June 13, 2026
spot_imgspot_img
spot_imgspot_img

ಇಂದಿನಿಂದ ನೀವು ವಾಟ್ಸಾಪ್’ನಲ್ಲೂ ಕಳುಹಿಸಬಹುದು ಹಣ..!!

- Advertisement -
- Advertisement -

ನವದೆಹಲಿ(ನ6): ಇಂದಿನಿಂದ ನೀವು ವಾಟ್ಸಾಪ್’ನಲ್ಲೂ ಹಣ ಕಳುಹಿಸಬಹುದು. ಈಗ ವಾಟ್ಸಾಪ್ ಬಳಕೆದಾರರು ಆ‌ಪ್ ಮೂಲಕ ಹಣ ವರ್ಗಾಯಿಸಬಹುದಾಗಿದೆ. ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ವಾಟ್ಸಾಪ್‌ಗೆ ಅನುಮೋದನೆ ನೀಡಿದೆ.


ವಾಟ್ಸಾಪ್ ಯುಪಿಐ ಆಧಾರಿತ ಪಾವತಿ ಪರೀಕ್ಷೆಯನ್ನು ಈಗಾಗಲೇ ಮಾಡಿದ್ದು, ಇದಕ್ಕಾಗಿ ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ ಮತ್ತು ಜಿಯೋ ಪೇಮೆಂಟ್ಸ್ ಬ್ಯಾಂಕ್ ಜತೆ ಒಪ್ಪಂದ ಮಾಡಿಕೊಂಡಿದೆ. ಸುಮಾರು 3 ವರ್ಷಗಳಿಂದ ವಾಟ್ಸಾಪ್ ಎನ್ ಪಿ ಸಿ ಐ ಒಪ್ಪಿಗೆಗೆ ಕಾದಿತ್ತು. ಕೊನೆಗೂ ಎನ್’ಪಿಸಿಐ ಒಪ್ಪಿಗೆ ಸಿಕ್ಕಿದ್ದು, ಈಗ ವಾಟ್ಸಾಪ್ ಕಂಪನಿ ಭಾರತದಲ್ಲಿ ಲೈವ್ ಮಾಡಿದೆ.

ಮೊದಲೇ ನಿಮ್ಮ ವಾಟ್ಸಾಪ್ ನಲ್ಲಿ ಪೇಮೆಂಟ್ ಆಯ್ಕೆಯಿದ್ದರೆ ನೀವು ಇದನ್ನು ಬಳಸಬಹುದು. ಒಂದು ವೇಳೆ ಆಯ್ಕೆ ಇಲ್ಲದೆ ಹೋದಲ್ಲಿ ನೀವು ವಾಟ್ಸಾಪ್ ಅಪ್ಡೇಟ್ ಮಾಡಿ ವಾಟ್ಸಾಪ್ ಪೇಮೆಂಟ್ ಆಯ್ಕೆಯನ್ನು ಪಡೆಯಬಹುದು. ವಾಟ್ಸಾಪ್ ಪೇಮೆಂಟ್ ಬಳಸಲು ಗ್ರಾಹಕರ ಬಳಿ ಡೆಬಿಟ್ ಕಾರ್ಡ್ ಇರಬೇಕು. ವಾಟ್ಸಾಪ್ ಪೇಮೆಂಟ್ ಗೆ ಹೋಗಿ ಬ್ಯಾಂಕ್ ವಿವರಗಳನ್ನು ನಮೂದಿಸಿದ ನಂತರ ಇದನ್ನು ಸಕ್ರಿಯಗೊಳಿಸಬಹುದಾಗಿದೆ. ದೇಶದಲ್ಲಿ ವಾಟ್ಸಾಪ್ ಪೇಮೆಂಟ್ ಹತ್ತು ಪ್ರಾದೇಶಿಕ ಭಾಷೆಯಲ್ಲಿ ಲಭ್ಯವಿದೆ.

- Advertisement -

Related news

error: Content is protected !!