




ವಿಟ್ಲ: ಪೂರ್ವ ಪ್ರಾಥಮಿಕ ವಿಭಾಗದ ಯು.ಕೆ.ಜಿ ತರಗತಿಯ 98 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ಹೊರೈಝನ್ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ನಡೆಯಿತು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಸನ ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಎಮಿನೆಂಟ್ ಎಜುಕೇಶನಲ್ ಇನ್ಸ್ಟಿಟ್ಯೂಟ್ ಇದರ ಚೆಯರ್‌ಮ್ಯಾನ್ ಝುಬೈರ್ ಭಾಗವಹಿಸಿ ಪೋಷಕರಿಗೆ ಮೊಬೈಲ್ ಬಳಕೆಯ ದುಷ್ಪರಿಣಾಮದ ಬಗ್ಗೆ ಕಿವಿಮಾತು ನೀಡಿದರು.ಮುಖ್ಯ ಶಿಕ್ಷಕರಾದ ಮನಾಝಿರ್ ಮುಡಿಪು ಪ್ರಸ್ತಾವನೆಗೈದರು.

ವೇದಿಕೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಾಕ್ಷರಾದ ವಿ.ಕೆ.ಎಂ ಅಶ್ರಫ್, ಕಾರ್ಯದರ್ಶಿ ಅಬೂಬಕರ್ ನೋಟರಿ ನ್ಯಾಯವಾದಿ ವಿಟ್ಲ, ಜೊ.ಕಾರ್ಯದರ್ಶಿ ಇಕ್ಬಾಲ್ ಹಳೆಮನೆ, ಟ್ರಸ್ಟ್ ಸದಸ್ಯರಾದ ಅಬ್ದುಲ್ ಹಮೀದ್ ಬದ್ರಿಯಾ, ಇಸಾಕ್ ಹಾಜಿ ವರೈಟಿ, ಅಬ್ದುಲ್ ರಹಿಮಾನ್ ದೀಪಕ್ ಹಾಗೂ ವಿಟ್ಲ ಜುಮಾ ಮಸೀದಿ ಕಾರ್ಯದರ್ಶಿ ಇಸ್ಮಾಯಿಲ್, ಕೋಶಾಧಿಕಾರಿ ಶರೀಫ್ ಪೊನ್ನೊಟ್ಟು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯ ಘಟಿಕೋತ್ಸವ ಮಾದರಿಯಲ್ಲಿ ಪ್ರಮಾಣ ಪತ್ರ ವಿತರಿಸಿ, ಅಭಿನಂದಿಸಿ ಸ್ಪೂರ್ತಿ ತುಂಬಲಾಯಿತು. ಪದವಿ ಸ್ವೀಕರಿಸಿದ ಪುಟಾಣಿ ವಿದ್ಯಾರ್ಥಿಗಳ ಭಾಷಣ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಶಾಲಾ ಶಿಕ್ಷಕರು ಸಹಕರಿಸಿದರು.









