Monday, July 7, 2025
spot_imgspot_img
spot_imgspot_img

ವಿಟ್ಲ: ಜೇಸಿಐ ವಿಟ್ಲ ಸಾರಥ್ಯದಲ್ಲಿ ಮಧ್ಯಂತರ ಸಮ್ಮೇಳನ-2024 ತುಂತುರು ಜೇಸಿಗಳ ಸಿಂಚನ

- Advertisement -
- Advertisement -

ವಿಟ್ಲ: ಜೇಸಿಐ ಆತಿಥ್ಯದಲ್ಲಿ ಜೇಸಿಐ ನ ಮಧ್ಯಂತರ ಸಮ್ಮೇಳನ ತುಂತುರು ವಿಟ್ಲದ ಶತಮಾನೋತ್ಸವ ಸ್ಮರಕ ಭವನ ಸಮುದಾಯ ಭವನದಲ್ಲಿ ನಡೆಯಿತು.

ಬೆಳಿಗ್ಗೆನಿಂದ ಸಂಜೆ ವರೆಗೆ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿಟ್ಲ ಜೇಸಿಐ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟೆ ಪೆಲ್ತಡ್ಕ ಸ್ವಾಗತಿಸಿ, ಮಾತನಾಡಿ ಜೇಸಿಐ ಎಲ್ಲ ವಲಯಾಧ್ಯಕ್ಷರ, ಸದಸ್ಯರ ಸಹಕಾರದಿಂದ ಇಲ್ಲಿ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿದೆ. ಜೇಸಿ ಸಂಸ್ಥೆಯಿಂದ ನಾವು ಸಾಕಷ್ಟು ಕಲಿತಿದ್ದೇವೆ. ಇನ್ನಷ್ಟು ಕಲಿಯಲು ಇದೆ. ಇದರಿಂದಾಗಿ ಇಂತಹ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿದೆ ಎಂದರು.

ರಿಜೀನಲ್ ರಿಜೀನಲ್ ಸಿ ಜೆಎಫ್‌ಎಂ ದೀಪಕ್ ರಾಜ್ ಮಾತನಾಡಿ ಜೇಸಿ ಸಂಸ್ಥೆ ಕೊಟ್ಟಷ್ಟು ಅವಕಾಶ ಬೇರೆ ಯಾವ ಸಂಸ್ಥೆ ಕೊಟ್ಟಿಲ್ಲ. ಜೇಸಿ ಕುಟುಂಬದ ಬಗ್ಗೆ ನನಗೆ ತುಂಬನೇ ಸಹಕಾರಿಯಾಗಿದೆ. ಜೇಸಿ ಮೂಲಕ ಇನ್ನಷ್ಟು ಸೇವೆ ನಡೆಸಲು ನಾನು ಸಿದ್ಧನಿದ್ದೇನೆ ಎಂದರು.

ಸೀನಿಯರ್ ಅಡ್ವಕೇಟ್ ಗಿರೀಶ್ ಎಸ್.ಪಿ ಮಾತನಾಡಿ ವಿಟ್ಲ ಜೇಸಿಐ ಘಟಕ ತಮಗೆ ನೀಡಿದ ಆತಿಥ್ಯವನ್ನು ಸಂತೋಷವಾಗಿ ಸ್ವೀಕರಿಸಿ ಈ ಕಾರ್ಯಕ್ರಮ ಯಶಸ್ವಿಯಾಗಿ ಅಚ್ಚುಕಟ್ಟಾಗಿ ಮಾಡಿರುತ್ತಾರೆ. ಸಂತೋಷ್ ಶೆಟ್ಟಿ ಮತ್ತು ಅವರ ತಂಡದ ನಿಸ್ವಾರ್ಥ ಸೇವೆ ಮೆಚ್ಚುವಂತಾಗಿದೆ ಎಂದರು.

ಜೇಸಿಐ ಪಿಪಿಪಿ ರಾಕೇಶ್ ಕುಂಜತ್ತೂರು ಮಾತನಾಡಿ ಇಲ್ಲಿ ಹಲವಾರು ಮಂದಿ ಪ್ರಶಸ್ತಿ ಪಡೆಯುತ್ತೀರಿ, ಅದನ್ನು ಉಳಿಸಿಕೊಳ್ಳುವ ಕಾರ್ಯ ಮಾಡಬೇಕು. ಪ್ರಶಸ್ತಿ ಪಡೆಯುವುದು ಅದು ಹೆಚ್ಚಿನ ಸಾಧನೆ ಮಾಡಲು ಪ್ರೇರಣೆಯಾಗಿದೆ ಎಂದರು.

ಪ್ರಕಾಶ್ ಹೆಬ್ರಿ ದಿಕ್ಸೂಚಿ ಭಾಷಣ ಮಾಡಿದರು. ವೇದಿಕೆಯಲ್ಲಿ ಪ್ರಮುಖರಾದ ರಾಘುವೇಂದ್ರ ಚತ್ರಮಕ್ಕಿ, ಅಶೋಕ ಗಂಡಾಳಿಕೆ, ಮಾಲತಿ ಉಮೇಶ್, ಸ್ವರಾಜ್ ಶೆಟ್ಟಿ, ಆದರ್ಶ ಶೆಟ್ಟಿ, ಸುನೀಲ್ ಕುಮಾರ್, ರವಿಚಂದ್ರ ಪಾಟಾಲಿ, ಭರತ್ ಶೆಟ್ಟಿ, ಹೇಮಲತಾ ಪ್ರದೀಪ್, ಅಭಿಲಾಷ್ ಬಿ.ಓ, ಲೋಕೇಶ್ ರೈ, ರಾಜೇಶ್ವರಿ ಗಿರೀಸ್, ಸೌಮ್ಯ ರಾಕೇಶ್, ವಿಘ್ನೇಶ್ ಪ್ರಸಾದ್, ರಾಕೇಶ್ ಹೊಸಬೆಟ್ಟು, ಸನತ್ ಕುಮಾರ್, ಶಂಕರ್ ರಾವ್ ಬಿ, ಅಭಿಷೇಕ್ ಜಿ.ಎಂ, ಪುರುಷೋತ್ತಮ ಶೆಟ್ಟಿ, ಪ್ರದೀಪ್ ಶೆಟ್ಟಿ ಮತ್ತು ವಿವಿಧ ವಲಯಗಳ ಪದಾಧಿಕಾರಿ, ಜೇಸಿ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಮುರಳಿ ಪ್ರಸಾದ್, ಕೋಶಾಧಿಕಾರಿ ಲೂಯಿಸ್ ಮಸ್ಕರೇಂಞಸ್, ಕಾರ್ಯಕ್ರಮ ಸಂಯೋಜಕ ಅಭಿಷೇಕ್ ಬಲ್ಲಾಲ್ ವಿವಿಧ ಜವಾಬ್ದಾರಿ ನಿಭಾಯಿಸಿದರು.

- Advertisement -

Related news

error: Content is protected !!