Monday, February 10, 2025
spot_imgspot_img
spot_imgspot_img

ವಿಟ್ಲ: ಜ.21 ವಿಟ್ಲ ಮಹಾ ರಥೋತ್ಸವದ ವಾಹನ ಪಾರ್ಕಿಂಗ್‌ ಬಗ್ಗೆ ಪೊಲೀಸ್‌ ಪ್ರಕಟಣೆ

- Advertisement -
- Advertisement -

ವಿಟ್ಲ: ಮಹತ್ತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜ. 21ರಂದು ವಿಟ್ಲ ಮಹಾರಥೋತ್ಸವದಂದು ವಾಹನ ಪಾರ್ಕಿಂಗ್‌ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಿಂದ ನಿಯಮಗಳನ್ನು ಜಾರಿಗೊಳಿಸಲಾಗಿದೆ.

1)ಕೇರಳ, ಅಡ್ಯನಡ್ಕ, ಪುಣಚ, ಕನ್ಯಾನ, ಕಡೆಯಿಂದ ಬರುವ ವಾಹನಗಳಿಗೆ – ಬಾಕಿಮಾರು ಗದ್ದೆ, ಅಡ್ಡದ ಬೀದಿ ಗದ್ದೆ.

2)ಪುತ್ತೂರು, ಕಬಕ, ಕಂಬಳಬೆಟ್ಟು, ಕುಂಡಡ್ಕ, ಕಡೆಯಿಂದ ಬರುವ ವಾಹನಗಳಿಗೆ- ಮೇಗಿನಪೇಟೆ ಬ್ರೈಟ್ ಹಾಲ್‌ನ ಪಾರ್ಕಿಂಗ್ ಸ್ಥಳ

3)ಸಾಲೆತ್ತೂರು, ಕೊಳ್ನಾಡು, ಕುಡ್ತಮುಗೇರು, ಕಡೆಯಿಂದ ಬರುವ ವಾಹನಗಳಿಗೆ – ಸೈಂಟ್ ರೀಟಾ ಶಾಲಾ ಪಾರ್ಕಿಂಗ್ ಸ್ಥಳ

4)ವಿಟ್ಲ, ಮಂಗಳಪದವು, ಅನಂತಾಡಿ ಕಡೆಯಿಂದ ಬರುವ ವಾಹನಗಳಿಗೆ – ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ

5)ದೇವಸ್ಥಾನದ ಸುತ್ತಮುತ್ತ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ ಹಾಗೂ ಬೊಬ್ಬೇಕೇರಿ ರಥಬೀದಿ ಕ್ವಾಲಿಟಿ ಬೇಕರಿ ಬಳಿಯಿಂದಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.

6)ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

7)ದೇವಸ್ಥಾನಕ್ಕೆ ಬರುವ ಸಮಯ ಬೆಲೆಬಾಳುವ ವಸ್ತುಗಳ ಬಗ್ಗೆ ನಿಗಾ ವಹಿಸುವುದು

8)ದೇವಸ್ಥಾನಕ್ಕೆ ಬರುವ ಸಮಯ ಕನಿಷ್ಟ ಒಬ್ಬರಾದರೂ ಮನೆಯಲ್ಲಿ ಇರುವಂತೆ ನಿಗಾವಹಿಸುವುದು.

- Advertisement -

Related news

error: Content is protected !!