

ವಿಟ್ಲ: ಉಕ್ಕುಡ ರಸ್ತೆಯ ಅಪ್ಪೇರಿಪಾದೆ ಎಂಬಲ್ಲಿ ಅನೇಕ ದಿನಗಳಿಂದ ರಸ್ತೆ ಹದಗೆಟ್ಟಿದ್ದು, ಸಾರ್ವಜನಿಕರ ವಾಹನ ಓಡಾಟಕ್ಕೆ ತೊಂದರೆಯಾಗುತ್ತಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಗಿದೆ. ಅಲ್ಲದೆ, ಇಲ್ಲಿ ರಸ್ತೆ ಹದಗೆಟ್ಟಿರುವುದರಿಂದ ಅನೇಕ ಅಪಘಾತಗಳು ಸಂಭವಿಸಿವೆ. ಸುಮಾರು ಮೂರು ಕಿ.ಮೀ ನಷ್ಟು ಗುಂಡಿಗಳು ರಸ್ತೆಯಲ್ಲಿ ಕಾಣಸಿಗುತ್ತಿದ್ದು, ಸಾರ್ವಜನಿಕರ ವಾಹನ ಪರದಾಟ ಅನೇಕ ದಿನಗಳಿಂದ ನಡೆಯುತ್ತಿದೆ.
ಇಂದು ಅಳಿಕೆ ಪರಿಸರದಲ್ಲಿ ನಡೆಯುವ ಕಾರ್ಯಕ್ರಮದ ನಿಮಿತ್ತ ಶಾಸಕರು, ಎಂಪಿ ಸೇರಿದಂತೆ ಹಲವು ಗಣ್ಯರು ಈ ರಸ್ತೆಯಲ್ಲಿ ಸಾಗಿಬರಲಿದ್ದು, ಈ ಹಿನ್ನಲೆ ಈ ರಸ್ತೆಯಲ್ಲಿರುವ ಮೃತ್ಯುಕೂಪಗಳ ಬಗ್ಗೆ ಇವರೆಲ್ಲರೂ ಗಮನ ಹರಿಸುವಂತೆ ಸಾರ್ವಜನಿಕರು ರಸ್ತೆಯಲ್ಲಿರುವ ಹೊಂಡದಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆಯ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದ ಕ್ಯಾ.ಬ್ರಿಜೇಶ್ ಚೌಟ ಮತ್ತು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಇದೇ ರಸ್ತೆಯ ಮೂಲಕ ಸಂಚರಿಸುವ ಕಾರಣ ಸಾರ್ವಜನಿಕರು ಈ ರೀತಿ ಪ್ರತಿಭಟನೆ ನಡೆಸಿದ್ದಾರೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.








