Saturday, April 27, 2024
spot_imgspot_img
spot_imgspot_img

ವಾಟ್ಸಾಪ್ ನ ನಿಯಮಕ್ಕೆ ಒಪ್ಪದಿದ್ದರೆ ಅಕೌಂಟ್ ಡಿಲೀಟ್

- Advertisement -G L Acharya panikkar
- Advertisement -

ನವದೆಹಲಿ:  ವಾಟ್ಸಾಪ್  ತನ್ನ ಬಳಕೆದಾರರಿಗೆ ಅದರ ಸೇವಾ ನಿಯಮಗಳಲ್ಲಿನ ಬದಲಾವಣೆ ಮತ್ತು ಗೌಪ್ಯತೆ ನೀತಿಯ ಬಗ್ಗೆ ತಿಳಿಸಲು ಮಂಗಳವಾರದಿಂದ ನೋಟಿಫಿಕೇಶನ್ ಗಳನ್ನು ಕಳುಹಿಸಲು ಆರಂಭಿಸಿದೆ.

ವಾಟ್ಸಾಪ್ ತನ್ನ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ನವೀಕರಿಸುತ್ತಿದೆ ಎಂದು ಕಂಪನಿಯು ಅಧಿಸೂಚನೆಯಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ತಿಳಿಸಿದೆ.  ಕಂಪನಿಯು ಬಳಕೆದಾರರ ಡೇಟಾವನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಮುಂತಾದ ಪ್ರಮುಖ ಮಾಹಿತಿಗಳನ್ನು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ವಾಟ್ಸಾಪ್ ನ ಈ  ಹೊಸ ನಿಯಮಗಳು ಫೆಬ್ರವರಿ 8, 2021 ರಿಂದ ಜಾರಿಗೆ ಬರಲಿದೆ. ಒಂದು ವೇಳೆ ಈ ನೀತಿಗಳನ್ನು ಬಳಕೆದಾರರು ಒಪ್ಪದಿದ್ದರೆ ಅಥವಾ ಅಗ್ರಿ ಆಯ್ಕೆಯನ್ನು ಕ್ಲಿಕ್ ಮಾಡದಿದ್ದರೇ ವಾಟ್ಸಾಪ್ ಖಾತೆ ಡಿಲೀಟ್ ಆಗುತ್ತದೆ. ಸರಳವಾಗಿ ಹೇಳವುದಾದರೇ ಈ ಬದಲಾವಣೆಗಳನ್ನು ಸ್ವೀಕರಿಸದ ಬಳಕೆದಾರರನ್ನು ವಾಟ್ಸಾಪ್ ನಿಂದ ಬಹಿಷ್ಕರಿಸಲಾಗುತ್ತದೆ ಎಂದೇ ವರದಿಯಾಗಿದೆ.

- Advertisement -

Related news

error: Content is protected !!