- Advertisement -
- Advertisement -
ವಿಟ್ಲ: ಬಂಟ್ವಾಳ ತಾಲೂಕು ಪೆರಾಜೆ ಎಂಬಲ್ಲಿ ಗುಲಾಬಿ ಎಂಬವರ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಅಡಿಕೆ ತೆಗೆದ ಘಟನೆ ನಡೆದಿದೆ.

ಫೆ 23ರಂದು ಬೆಳಿಗ್ಗೆ 09-30 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಬಡೆಕೋಡಿ ಎಂಬಲ್ಲಿ ಗುಲಾಬಿ ಎಂಬವರ ಅಡಿಕೆ ತೋಟಕ್ಕೆ ದೇಜಪ್ಪ ,ಶ್ವೇತಾ ,ಸೋನಾ ಹಾಗೂ ರಂಜೀತ್‌ರವರು ಅಕ್ರಮ ಪ್ರವೇಶ ಮಾಡಿ ಅಡಿಕೆ ಮರದಿಂದ ಅಡಿಕೆ ತೆಗೆಯುತ್ತಿದ್ದು,ಇದನ್ನು ಕಂಡು ಗುಲಾಬಿಯವರ ಮಗಳು ತನ್ನ ತಾಯಿಗೆ ಫೋನ್ ಮುಖಾಂತರ ತಿಳಿಸಿರುತ್ತಾಳೆ.

ಗುಲಾಬಿಯವರು ಸ್ಥಳಕ್ಕೆ ಬಂದು ಪ್ರಶ್ನಿಸಿದಾಗ ಆರೋಪಿಗಳು ಗುಲಾಬಿ ಹಾಗೂ ಅವರ ಮಗಳನ್ನುಅವಾಚ್ಯ ಶಬ್ದಗಳಿಂದ ಬೈದು ಗುಲಾಬಿ ಹಾಗೂ ಅವರ ಮಗಳಿಗೆ ಕೈಯಿಂದ ಹಲ್ಲೆ ಮಾಡಿ ,ಕಾಲಿನಿಂದ ತುಳಿದು ಜೀವಬೆದರಿಕೆ ಹಾಕಿರುತ್ತಾರೆಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.


- Advertisement -








