Friday, March 29, 2024
spot_imgspot_img
spot_imgspot_img

ಮಹಿಳಾ ಪ್ರವೇಶ ಮುಕ್ತವಾದ ಶಬರಿಮಲೆ !!!

- Advertisement -G L Acharya panikkar
- Advertisement -

ತಿರುವನಂತಪುರಂ: ಶಬರಿಮಲೆ ಆನ್‌ಲೈನ್ ಟಿಕೆಟ್ ಕಾಯ್ದಿರಿಸುವ ಪೋರ್ಟಲ್‌ನಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆಗೆದುಹಾಕಲಾಗಿದೆ. ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ವಯಸ್ಸಿನ ಅಂತರವಿಲ್ಲದೆ ಎಲ್ಲರೂ ದೇವರ ದರ್ಶನ ಪಡೆದುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು.

ಭಕ್ತರು ಟ್ರ್ಯಾವಂಕೋರ್ ದೇವಸ್ವಂ ಮಂಡಳಿ ಮತ್ತು ಕೇರಳ ಪೊಲೀಸ್ ಇಲಾಖೆ ನಡೆಸುತ್ತಿರುವ ಪೋರ್ಟಲ್‌ನಲ್ಲಿ ತಮ್ಮ ಯಾತ್ರೆಯ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ಆದರೆ ವೆಬ್ ಪೋರ್ಟಲ್‌ನಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರ ಟಿಕೆಟ್ ಖರೀದಿಸಲು ಅವಕಾಶವಿಲ್ಲ ಎಂದು ನಮೂದಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿತ್ತು. ಪೊಲೀಸ್ ಇಲಾಖೆ ಇ ಪೋರ್ಟಲ್ ನಿಭಾಯಿಸುವುದರಿಂದ ಕೇರಳ ಸರ್ಕಾರವೇ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು.

ಕೇರಳ ಸರ್ಕಾರ ವೆಬ್ ಪೋರ್ಟಲ್‌ನಲ್ಲಿ ಮಹಿಳೆಯ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಉಲ್ಲೇಖಿಸಿದ್ದ ಸೂಚನೆಯನ್ನು ತೆಗೆದುಹಾಕಿದೆ. ಇದರಿಂದ ಎಲ್ಲ ವಯಸ್ಸಿನ ಮಹಿಳಾ ಭಕ್ತರು ಕೂಡ ಶಬರಿಮಲೆಗೆ ತೆರಳಲು ಟಿಕೆಟ್ ಪಡೆಯಲು ಅವಕಾಶ ನೀಡಲಾಗಿದೆ.

- Advertisement -

Related news

error: Content is protected !!