Wednesday, July 22, 2026
spot_imgspot_img
spot_imgspot_img

ಕೇಂದ್ರದಿಂದ ಗ್ಯಾಸ್‌ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

- Advertisement -
- Advertisement -

ಬೆಂಗಳೂರು : ಕೇಂದ್ರ ಸರಕಾರ ವಾಣಿಜ್ಯ ಗ್ಯಾಸ್‌ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು, ಬಿಜೆಪಿ ಅಂಧ ಭಕ್ತರಿಗೆ ಮಾತ್ರ ಬೆಲೆ ಹೆಚ್ಚಳ ಮಾಡಬೇಕು ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.ಶನಿವಾರನ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಸ್‌.ಮಂಜುನಾಥ್ ಗೌಡ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಖಾಲಿ ಸಿಲಿಂಡ‌ರ್ ಪ್ರದರ್ಶನದ ಮೂಲಕ ವಿನೂತನವಾಗಿ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಚ್‌.ಎಸ್‌.ಮಂಜುನಾಥ್ ಗೌಡ, ಚುನಾವಣೆಗೊಸ್ಕರ ದರ ಏರಿಕೆ ಮಾಡದೇ, ಇದೀಗ ವಾಣಿಜ್ಯ ಗ್ಯಾಸ್ ದರ ಹೆಚ್ಚಳ ಮಾಡಿ, ಬೀದಿ ಬದಿಯ ಸಣ್ಣ ವ್ಯಾಪಾರಿಗಳು ಮತ್ತು ಹೋಟೆಲ್ ಕಾರ್ಮಿಕರಿಗೆ ಬಹಳ ಸಂಕಷ್ಟ ನೀಡಲಾಗುತ್ತಿದೆ. ಈ ಬಗ್ಗೆ ರಾಜ್ಯದಲ್ಲಿ ಆಯ್ಕೆಯಾಗಿರುವ ಬಿಜೆಪಿ ಸಂಸದರು ಮೌನವಹಿಸಿದ್ದಾರೆ. ಅದರಲ್ಲೂ ಕೇಂದ್ರ ಸರಕಾರ ಬಿಜೆಪಿ ಅಂಧ ಭಕ್ತರಿಗೆ ಗ್ಯಾಸ್ ಬೆಲೆ ಹೆಚ್ಚಳ ಮಾಡಿ ಕೊಡಿ ಅವರು ಸಹಿಸಿಕೊಳ್ಳುತ್ತಾರೆ, ಸಾಮಾನ್ಯ ಜನರಿಗೆ ದರ ಕಡಿಮೆ ಮಾಡಿ ಎಂದರು.

- Advertisement -

Related news

error: Content is protected !!