ವಿಟ್ಲ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ಸಾರಥ್ಯದ ನಾಟ್ಯಗುರು ರಕ್ಷಿತ್ ಶೆಟ್ಟಿ ಪಡ್ರೆ ಇವರ ನಿರ್ದೇಶನದ ಆರ್.ಕೆ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಪೌರಾಣಿಕ ಯಕ್ಷಗಾನ ಬಯಲಾಟವು ನ.11ರಂದು ಶನಿವಾರ ಸಂಜೆ ಗಂಟೆ 4ಕ್ಕೆ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ’ಸುದರ್ಶನ ವಿಜಯ-ದ್ರೌಪದಿ ಪ್ರತಾಪ-ನರಕಾಸುರ ಮೋಕ್ಷ ಎಂಬ ಕಥಾಭಾಗವನ್ನು ಆಡಿತೋರಿಸಲಿದ್ದಾರೆ.
ಸಂಜೆ 4.30ಕ್ಕೆ ಶ್ರೀಪಂಚಲಿಂಗೇಶ್ವರ ದೇವರ ಪ್ರಾರ್ಥನೆ ಮತ್ತು ಚೌಕಿ ಪೂಜೆ, 5 ರಿಂದ ಸಭಾಕಾರ್ಯಕ್ರಮ ನಡೆಯಲಿದೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಬಂಗಾರು ಅರಸರು, ವಿಟ್ಲ ಅರಮನೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿಗಳು ಮತ್ತು ಕಲಾಪೋಷಕ ಕುಸುಮಾದರ ಶೆಟ್ಟಿ, ಯಕ್ಷಪೋಷಕರು ಮತ್ತು ಉದ್ಯಮಿಗಳು ದಿನಕರ ಭಟ್ ಮಾವೆ, ವಿಟ್ಲ ಇಕೋ ಬ್ಲಿಸ್ ಕೋಡಪದವು ವ್ಯವಸ್ಥಾಪಕ ರಾಜಾರಾಮ ಬಲಿಪಗುಳಿ, ಕಲಾಪೋಷಕರು ಪ್ರಕಾಶ್ ಶೆಟ್ಟಿ ಕಲ್ಲಂಗಳ, ಸತೀಶ್ ಆಳ್ವ ಇರಾ ಉದ್ಯಮಿಗಳು, ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ, ವಿಟ್ಲ ಘಟಕದ ಅಧ್ಯಕ್ಷ ಚಂದ್ರಹಾಸ ಸುವರ್ಣ, ಆರ್.ಕೆ ಯಕ್ಷಗಾನ ಕಲಾ ಕೇಂದ್ರ ವಿಟ್ಲ ಗೌರವಾಧ್ಯಕ್ಷ ಕೃಷ್ಣಯ್ಯ ಕೆ.ವಿಟ್ಲ ಅರಮನೆ, ಕಲಾಪೋಷಕರು ಜಯರಾಮ ಬಲ್ಲಾಳ್, ವಿಟ್ಲ ಅರಮನೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷ ಹಾಸ್ಯ ಕಲಾವಿದ ದಿನೇಶ್ ಶೆಟ್ಟಿಗಾರ್ ಕೋಡಪದವು ಯಕ್ಷ ಸನ್ಮಾನ ಸ್ವೀಕರಿಸಲಿದ್ದಾರೆ. ಯಕ್ಷಗುರು ರಕ್ಷಿತ್ ಶೆಟ್ಟಿ ಪಡ್ರೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.
ಸಂಜೆ 6 ಕ್ಕೆ ಮಕ್ಕಳ ಯಕ್ಷಗಾನ ಆರ್.ಕೆ ಯಕ್ಷಗಾನ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ನಾಟ್ಯಮಯೂರಿ ಯಕ್ಷಗುರುಗಳಾದ ರಕ್ಷಿತ್ ಶೆಟ್ಟಿ ಪಡ್ರೆಯವರ ನಿರ್ದೇಶನದಲ್ಲಿ ಸುದರ್ಶನ ವಿಜಯ-ದ್ರೌಪದಿ ಪ್ರತಾಪ-ನರಕಾಸುರ ಮೋಕ್ಷ’ ನಡೆಯಲಿದೆ.