Friday, May 3, 2024
spot_imgspot_img
spot_imgspot_img

ಬಂಟ್ವಾಳ: ಮಾರಾಟಕ್ಕೆ ನಿಷೇಧವಿದ್ದ ಸಿಮೆಂಟ್‌ ಮನೆಯ ಕಾಮಗಾರಿ ಬಳಕೆಗೆ ದಾಸ್ತಾನು; ಬಿಜೆಪಿ ಮುಖಂಡನ ಮನೆ ಸಹಿತ ಮತ್ತೋರ್ವರ ಮನೆ ಮೇಲೆ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ

- Advertisement -G L Acharya panikkar
- Advertisement -

ಬಂಟ್ವಾಳ: ಮಾರಾಟ ಮಾಡಲು ಅವಕಾಶ ಇಲ್ಲದ ಸಿಮೆಂಟ್ ನ್ನು ಮನೆಕಟ್ಟಲು ಬಳಕೆ ಮಾಡುವ ಉದ್ದೇಶದಿಂದ ಸಿಮೆಂಟ್ ದಾಸ್ತಾನು ಇರಿಸಲಾಗಿದ್ದ ಜಾಗಕ್ಕೆ ಬಂಟ್ವಾಳ ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ ಸಿಮೆಂಟ್ ನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿ ಬಳಿಕ ಹೆಚ್ಚಿನ ತನಿಖೆಗಾಗಿ ಬಂಟ್ವಾಳ ಪುರಸಭೆಗೆ ಪ್ರಕರಣವನ್ನು ನೀಡಲಾಗಿದೆ.

ಪಲ್ಲಮಜಲು ನಿವಾಸಿ ಸೋಮಸುಂದರ ಕೆ‌. ಅವರ ಮನೆ ನಿರ್ಮಾಣಕ್ಕೆ ಮಾರಾಟಕ್ಕೆ ಅವಕಾಶವಿಲ್ಲದ 21 ಸಿಮೆಂಟ್ ಗೋಣಿ ಚೀಲಗಳು ಸ್ಥಳದಲ್ಲಿ ಪತ್ತೆಯಾಗಿದೆ. ಇದರ ಜೊತೆಗೆ ಖಾಲಿಯಾದ ಐದು ಗೋಣಿ ಸಿಮೆಂಟ್ ಚೀಲಗಳು ಪತ್ತೆಯಾಗಿದೆ. ತಹಶೀಲ್ದಾರ್‌ ಹಾಗೂ ಪೊಲೀಸ್‌ ನೇತೃತ್ವದ ತಂಡ ಬಂಟ್ವಾಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಎಂಬವರ ಮನೆಗೆ ರಾತ್ರೋರಾತ್ರಿ ದಾಳಿ ನಡೆಸಿದ್ದಾರೆ. ಈ ವೇಳೆ ಅಪಾರ ಪ್ರಮಾಣದಲ್ಲಿ ಸಿಮೆಂಟ್‌ ಪತ್ತೆಯಾಗಿದ್ದು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!