ಬಂಟ್ವಾಳ: ಲಾಕ್ ಡೌನ್ ನಿಂದ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನ ಮಾಡುವ ಯಕ್ಷಗಾನ ಕಲಾವಿದರಿಗೆ ಶನಿವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಚೇರಿಯಲ್ಲಿ ಕಿಟ್ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಯಕ್ಷಗಾನ ಕಲಾವಿದರು ಸಂಕಷ್ಟದಲ್ಲಿದ್ದು, ಮಳೆಗಾಲದಲ್ಲಿ ಅವರಿಗೆ ನೆರವು ನೀಡುವುದು ಶ್ಲಾಘನೀಯ ಕಾರ್ಯ. ಈ ನಿಟ್ಟಿನಲ್ಲಿ ಕಲಾವಿದರಾಗಿ ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಸರಪಾಡಿ ಅಶೋಕ್ ಶೆಟ್ಟಿ ಅವರ ಪ್ರಯತ್ನ ಪ್ರಶಂಸನೀಯ ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಕಮಲಾಕ್ಷಿ ಪೂಜಾರಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಉಪಾಧ್ಯಕ್ಷ ರೋನಾಲ್ಡ್ ಡಿಸೋಜಾ ಉಪಸ್ಥಿತರಿದ್ದರು.
ಮಾ.17 ರಂದು ಯಕ್ಷಗಾನ ಕಲಾವಿದರು ಕಾಲಿಗೆ ಕಟ್ಟಿದ್ದ ಗೆಜ್ಜೆಯನ್ನು ಬಿಚ್ಚಿ ಕೆಳಗಿಟ್ಟವರಿಗೆ ಮತ್ತೆ ಯಕ್ಷಗಾನದ ರಂಗಪ್ರವೇಶ ಮಾಡಲು ಕೋವಿಡ್ 19ನಿಂದ ಅಸಾಧ್ಯ ಪರಿಸ್ಥಿತಿ ಉಂಟಾಯಿತು.
500 ಮಿಕ್ಕಿ ಯಕ್ಷಗಾನ ಕಲಾವಿದ್ದು, ಅದರಲ್ಲಿ ಆರ್ಥಿಕವಾಗಿ ತೀರ ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸಿ ಅವರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರ ಸಹಕಾರ ಹಾಗೂ ಹಿರಿಯ ಕಲಾವಿದ ಆಶೋಕ್ ಶೆಟ್ಟಿ ಸರಪಾಡಿ ಅವರ ನೇತ್ರತ್ವದಲ್ಲಿ ವಳಚ್ಚಿಲ್ ಖಾದರ್ , ರಂಗೋಲಿ ಸದಾನಂದ ಶೆಟ್ಟಿ, ರಾಮ್ ದಾಸ್ ಬಂಟ್ವಾಳ, ಡಾ.ಬಾಲಚಂದ್ರ ಶೆಟ್ಟಿ, ಖಾದರ್ ಇಕ್ರಾ, ದೇವದಾಸ್ ಶೆಟ್ಟಿ ಬಂಟ್ವಾಳ, ನಟರಾಜ ಕುಟ್ಟಿಕಲ, ಸುಧಾಕರ ಶೆಟ್ಟಿ ಮೊಗರೋಡಿ, ಸುರೇಶ್ ಮೀಯಾರು , ಚರಣ್ ಜುಮಾದಿಗುಡ್ಡೆ ಇವರ ಸಹಕಾರದಿಂದ ನೀಡುವ ದಿನಬಳಕೆಯ ವಸ್ತುಗಳ ಕಿಟ್ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಾಸಕರ ಕಚೇರಿಯಲ್ಲಿ ಕಲಾವಿದರಿಗೆ ಸಾಂಕೇತಿಕವಾಗಿ ವಿತರಿಸಿದರು.
ಕಾರ್ಯಕ್ರಮದ ಸಂಯೋಜಕ ಕಲಾವಿದ ಆಶೋಕ್ ಶೆಟ್ಟಿ ಸರಪಾಡಿ ಸ್ವಾಗತಿಸಿ, ವಂದಿಸಿದರು.