- Advertisement -
- Advertisement -
ಬೆಂಗಳೂರು: ಸ್ಯಾಂಡಲ್‍ವುಡ್‍ನ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತನ್ನ ಮಗನಿಗೆ 10 ತಿಂಗಳ ಬಳಿಕ ಇದೀಗ ನಾಮಕರಣ ಮಾಡಿದ್ದಾರೆ.



ಕೆಲ ದಿನಗಳ ಹಿಂದಷ್ಟೇ, ಶೀಘ್ರದಲ್ಲೇ ಮಗನ ಹೆಸರನ್ನು ಬಹಿರಂಗಪಡಿಸಲಾಗುವುದು’ ಎಂದು ರಾಧಿಕಾ ತಿಳಿಸಿದ್ದರು.ಯಶ್ ಮತ್ತು ರಾಧಿಕಾ ತಮ್ಮ ಮುದ್ದು ಮಗನಿಗೆ “ಯಥರ್ವ್ ಯಶ್” ಎಂದು ನಾಮಕರಣ ಮಾಡಿದ್ದಾರೆ.ಯಥರ್ವ್ ಎಂದರೆ ಪರಿಪೂರ್ಣ ಎಂದರ್ಥ. ಇವನಿಂದ ನಮ್ಮ ಜೀವನ ಪರಿಪೂರ್ಣವಾಗಿದೆ ಎಂದು ಬರೆದುಕೊಂಡಿದ್ದಾರೆ. ನಾಮಕರಣ ಸಂಭ್ರಮದ ವಿಡಿಯೋವನ್ನು ಯಶ್ ಮತ್ತು ರಾಧಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.


ಬಹಳ ಶಾಸ್ತ್ರೋಕ್ತವಾಗಿ ನಡೆದಿರುವ ಈ ನಾಮಕರಣದಲ್ಲಿ ಕುಟುಂಬದ ಕೆಲವೇ ಕೆಲವು ಮಂದಿ ಮಾತ್ರ ಭಾಗಿಯಾಗಿದ್ದಾರೆ. ಕಾರ್ಯಕ್ರಮವನ್ನು ಯಶ್ ಸರಳವಾಗಿ ಆಚರಿಸಿದ್ದು, ಕಾರ್ಯಕ್ರಮದಲ್ಲಿ ಎರಡು ಕುಟುಂಬದರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು.



- Advertisement -