Wednesday, April 24, 2024
spot_imgspot_img
spot_imgspot_img

ರಾಕಿಂಗ್ ಸ್ಟಾರ್ ಯಶ್ ಹೊಸ ಮನೆ ಗೃಹಪ್ರವೇಶ; ರಾಧಿಕಾ ಪಂಡಿತ್ ಕನಸಿನ ನಿವಾಸ..!

- Advertisement -G L Acharya panikkar
- Advertisement -

ರಾಕಿಂಗ್ ಸ್ಟಾರ್ ಯಶ್ ದಂಪತಿಗಳು ತಮ್ಮ ಕನಸಿನ ಮನೆಯ ಗೃಹಪ್ರವೇಶ ಮಾಡಿದ್ದಾರೆ. ತಮ್ಮ ಕುಟುಂಬದವರು ಹಾಗೂ ಕೆಲವೇ ಕೆಲವು ಆತ್ಮೀಯರ ಸಮ್ಮುಖದಲ್ಲಿ ಪೂಜೆ ನಡೆಸಿ ಮನೆಗೆ ಕಾಲಿಟ್ಟಿದ್ದಾರೆ ಯಶ್-ರಾಧಿಕಾ. ಸದ್ಯ ಯಶ್ ಅವರ ಹೊಸ ಮನೆಯ ಚಿತ್ರಗಳು ರಾಕಿಂಗ್ ಸ್ಟಾರ್ ಅಭಿಮಾನಿಗಳ ಪುಟಗಳಲ್ಲಿ ವೈರಲ್ ಆಗುತ್ತಿವೆ.

ರೇಸ್‌ಕೋರ್ಸ್ ರಸ್ತೆಯಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಅಪಾರ್ಟ್ಮೆಂಟ್‌ನಲ್ಲಿ ಈ ಹಿಂದೆಯೇ ಮನೆ ಖರೀದಿಸಿದ್ದು, ಈ ಐಷಾರಾಮಿ ಅಪಾರ್ಟ್ಮೆಂಟಿನಲ್ಲಿ ಇಂಟಿರಿಯರ್ ಕೆಲಸಗಳು ನಡೆಯುತ್ತಿತ್ತು. ಮನೆಯ ಕೆಲಸಗಳು ಪೂರ್ಣಗೊಂಡಿದ್ದು, ರಾಕಿಂಗ್ ದಂಪತಿಗಳು ಮನೆಯ ಗೃಹಪ್ರವೇಶವನ್ನು ಜುಲೈ 1ರಂದು ಮಾಡಿದ್ದಾರೆ.

ಗೃಹಪ್ರವೇಶದಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ರಾಕಿಂಗ್ ದಂಪತಿ ಮಿಂಚಿದ್ದಾರೆ. ಆಷಾಢ ಆರಂಭವಾಗುವ ಮೊದಲೇ ಮನೆಯ ಗೃಹಪ್ರವೇಶ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ನೆರವೇರಿಸಿದ್ದಾರೆಂದು ತಿಳಿದು ಬಂದಿದೆ.

- Advertisement -

Related news

error: Content is protected !!