Sunday, June 2, 2024
spot_imgspot_img
spot_imgspot_img

1,300 ವರ್ಷಗಳ ಹಿಂದೆ ಹಿಂದೂ ಶಾಹಿ ಅವಧಿಯಲ್ಲಿ ನಿರ್ಮಿಸಲಾದ ಹಿಂದೂ ದೇವಾಲಯ ಪತ್ತೆ

- Advertisement -G L Acharya panikkar
- Advertisement -

ಪೇಶಾವರ: 1,300 ವರ್ಷಗಳ ಹಿಂದೆ ಹಿಂದೂ ಶಾಹಿ ಅವಧಿಯಲ್ಲಿ ನಿರ್ಮಿಸಲಾದ ಹಿಂದೂ ದೇವಾಲಯವನ್ನು ಪಾಕಿಸ್ತಾನ ಮತ್ತು ಇಟಾಲಿಯನ್ ಪುರಾತತ್ವ ತಜ್ಞರು ವಾಯುವ್ಯ ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಪರ್ವತವೊಂದರಲ್ಲಿ ಪತ್ತೆ ಮಾಡಿದ್ದಾರೆ. ಬ್ಯಾರಿಕೋಟ್ ಘುಂಡೈನಲ್ಲಿ ನಡೆದ ಶೋಧ ಕಾರ್ಯದಲ್ಲಿ ಪತ್ತೆಮಾಡಿದ್ದಾರೆ.

ಕ್ರಿ.ಶ. 850–1026 ರಲ್ಲಿ ಆಳ್ವಿಕೆ ನಡೆಸಿದ ಹಿಂದೂ ಶಾಹಿಸ್ ಅಥವಾ ಕಾಬೂಲ್ ಶಾಹಿಸ್ ಎಂಬುದು ಹಿಂದೂ ರಾಜವಂಶವಾಗಿದ್ದು, ಇದು ಕಾಬೂಲ್ ಕಣಿವೆ (ಪೂರ್ವ ಅಫ್ಘಾನಿಸ್ತಾನ), ಗಾಂಧಾರ ಮತ್ತು ಇಂದಿನ ವಾಯುವ್ಯ ಭಾರತವನ್ನು ಆಳಿತ್ತು ಎನ್ನಲಾಗಿದೆ.


ಖೈಬರ್ ಪಖ್ತುನ್ಖಾ ಪುರಾತತ್ವ ವಿಭಾಗದ ಫಜಲ್ ಖಲೀಪ್ ಪತ್ತೆ ಮಾಡಿದ ದೇವಾಲಯವು ವಿಷ್ಣು ದೇವರದ್ದು ಎನ್ನಲಾಗಿದೆ.

- Advertisement -

Related news

error: Content is protected !!