- Advertisement -
- Advertisement -



ಕಂಬಳಬೆಟ್ಟು: ಎಸ್‌ಪಿವೈಎಸ್‌ಎಸ್ ಕರ್ನಾಟಕ ನೇತ್ರಾವತಿ ವಲಯ ಹಾಗೂ ಶ್ರೀ ಧರ್ಮ ಸೇವಾ ವಿಶ್ವಸ್ಥ ಮಂಡಳಿ, ಧರ್ಮನಗರ, ಕಂಬಳಬೆಟ್ಟು ಇದರ ಸಹಯೋಗದೊಂದಿಗೆ ಉಚಿತ ಯೋಗ ಶಿಕ್ಷಣ ತರಗತಿ ಶ್ರೀ ದುರ್ಗಾ ಮಂದಿರ ಧರ್ಮನಗರ, ಕಂಬಳಬೆಟ್ಟುವಿನಲ್ಲಿ ಸೆ.15 ಆದಿತ್ಯವಾರ ದಂದು ಉದ್ಘಾಟನೆಗೊಳ್ಳಲಿದೆ. ಯೋಗ ಶಿಕ್ಷಣ ತರಗತಿಯು 48 ದಿನಗಳ ಕಾಲ ಬೆಳಿಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ನಡೆಯಲಿದೆ.
ಮಧುಮೇಹ, ರಕ್ತದೊತ್ತಡ, ಬೊಜ್ಜಿನ ಸಮಸ್ಯೆ, ಮೂಲವ್ಯಾಧಿ, ಆಸಿಡಿಟಿ, ಅಜೀರ್ಣ, ಸಂಧಿವಾತ, ನಿದ್ರಾಹೀನತೆ, ವಾತರೋಗ, ಮಾನಸಿಕ ಒತ್ತಡ, ಮಂಡಿನೋವು ಮತ್ತು ಬೆನ್ನುನೋವು ಇವುಗಳಿಗೆ ಸೂಕ್ತ ಚಿಕಿತ್ಸಾಕ್ರಮವನ್ನು ಯೋಗದ ಮೂಲಕ ನೀಡಿ ಗರಿಷ್ಟ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಕೇಂದ್ರ ಸಮಿತಿಯಿಂದ ತರಬೇತಿ ಪಡೆದ ಶಿಕ್ಷಕರಿಂದ ತರಗತಿಗಳನ್ನು ನಡೆಸಲಾಗುವುದು. 10ರಿಂದ ಮೇಲ್ಪಟ್ಟ ಎಲ್ಲಾ ವಯಸ್ಸಿನವರು ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ 7204102998, 7892425920, 9353587402 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -