- Advertisement -
- Advertisement -


ಮಂಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇ 6ರಂದು ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ,
ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಯೋಗಿ ಮಿಂಚಿನ ಸಂಚಾರ ನಡೆಸಲಿದ್ದು ಕರಾವಳಿಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಲ್ಲಿ ಹೊಸ ಹುರುಪು ತರಲಿದ್ದಾರೆ. ಮೇ 6 ರಂದು ಬೆಳಗ್ಗೆ ಶೃಂಗೇರಿಯಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಪುತ್ತೂರಿಗೆ 12.30ಕ್ಕೆ ಆಗಮಿಸಲಿದ್ದಾರೆ.
ಅನಂತರ ಮಧ್ಯಾಹ್ನ 2ಗಂಟೆಗೆ ಬಂಟ್ವಾಳ, ಮಧ್ಯಾಹ್ನ 3.30ಕ್ಕೆ ಕಾರ್ಕಳ, 5 ಗಂಟೆಗೆ ಉತ್ತರ ಕನ್ನಡದ ಹೊನ್ನಾವರಕ್ಕೆ ಭೇಟಿ ನೀಡಿ, ಮುರುಡೇಶ್ವರದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಬಿಜೆಪಿ ಪ್ರಮುಖರು ಮಾಹಿತಿ ನೀಡಿದ್ದಾರೆ.
- Advertisement -








