Monday, August 10, 2026
spot_imgspot_img
spot_imgspot_img

“ಕರಿಮಣಿ ಮಾಲೀಕ ನೀನಲ್ಲ” ಎಂದು ಹೆಂಡತಿ ರೀಲ್ಸ್​​..; ಗಂಡ ಆತ್ಮಹತ್ಯೆ!

- Advertisement -
- Advertisement -

ಕರಿಮಣಿ ಮಾಲೀಕ ನೀನಲ್ಲ ಎಂದು ಹೆಂಡತಿ ರೀಲ್ಸ್ ಮಾಡಿದ್ದಕ್ಕೆ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ,ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ.

ಪಿ.ಜಿ‌.ಪಾಳ್ಯ ಗ್ರಾಮದ ನಿವಾಸಿ ಕುಮಾರ್ (33) ಮೃತ ಗಂಡ.

ಮೃತ ಕುಮಾರ್​ ಪತ್ನಿ, ಸೋದರ ಮಾವ ಹಾಗೂ ಸೋದರ ಮಾವನ ಹೆಂಡತಿ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಎಂದು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಪೋಸ್ಟ್ ಮಾಡಿರುವ ರೀಲ್ಸ್ ತೆಗೆಯುವಂತೆ ಗಂಡ ಮನವಿ ಮಾಡಿಕೊಂಡಿದ್ದಾನೆ.

ಇದೇ ವಿಚಾರಕ್ಕೆ ದಂಪತಿ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಹೀಗಾಗಿ ಪತ್ನಿಯ ವರ್ತನೆಗೆ ಮನನೊಂದು ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಹನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -

Related news

error: Content is protected !!