Sunday, June 7, 2026
spot_imgspot_img
spot_imgspot_img

ವಿಷ ಸೇವಿಸಿ ಯುವಪ್ರೇಮಿಗಳು ಆತ್ಮಹತ್ಯೆಗೆ ಶರಣು..!

- Advertisement -
- Advertisement -

ವಿಷ ಸೇವಿಸಿದ ಯುವಪ್ರೇಮಿಗಳು ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ತಾಪುರ ತಾಲೂಕಿನ ಚೌಕಿ ತಾಂಡ ಬಳಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರು ಚಿತ್ತಾಪುರ ತಾಲ್ಲೂಕಿನ ಕೊಲ್ಲೂರು ಗ್ರಾಮದ ನಿವಾಸಿ ಆಕಾಶ್ (18) ಹಾಗೂ ಚಿತ್ತಾಪುರ ತಾಲ್ಲೂಕಿನ ರಾಂಪೂರಹಳ್ಳಿ ನಿವಾಸಿ ರಾಧಿಕಾ (15) ಎಂದು ಗುರತಿಸಲಾಗಿದೆ.

ಮೃತ ಆಕಾಶ್ ಹಾಗೂ ರಾಧಿಕಾ ಅಕ್ಕ-ಪಕ್ಕದ ಹಳ್ಳಿಯವರಾಗಿದ್ದರು. ಕಳೆದೊಂದು ವರ್ಷದಿಂದ ಇಬ್ಬರು ಪ್ರೀತಿಯ ಬಲೆಗೆ ಬಿದ್ದಿದ್ದರು. ಆಕಾಶ್ ಇದ್ದಕ್ಕಿದ್ದಂತೆ ತನ್ನ ತಾಯಿಗೆ ಫೋನ್ ಮಾಡಿ ಇಬ್ಬರು ವಿಷ ಕುಡಿದಿದ್ದೇವೆ ಎಂದು ಹೇಳಿದ್ದಾರೆ. ಕೂಡಲೇ ಇಬ್ಬರನ್ನು ಬದುಕಿಸೋ ಪ್ರಯತ್ನ ಮಾಡಲಾಗಿದೆ. ಆಸ್ಪತ್ರೆಗೆ ಸಾಗಿಸೋ ಮಾರ್ಗ ಮಧ್ಯೆ ಯುವಪ್ರೇಮಿಗಳು ಸಾವನ್ನಪ್ಪಿದ್ದಾರೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!