Saturday, June 20, 2026
spot_imgspot_img
spot_imgspot_img

ಪೇಂಟಿಂಗ್‌ ಮಾಡುತ್ತಿದ್ದ ವೇಳೆ 3ನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು…!

- Advertisement -
- Advertisement -

ಕಟ್ಟಡವೊಂದರಲ್ಲಿ ಪೇಂಟಿಂಗ್‌ ಮಾಡುತ್ತಿದ್ದ ವೇಳೆ 3ನೇ ಮಹಡಿಯಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಮಾರ್ಕೆಟ್‌ ರಸ್ತೆಯಲ್ಲಿ ನಡೆದಿದೆ.

ರಘು ಸ್ಟಿಕರ್ಸ್‌ ನೂತನ ಕಟ್ಟಡಕ್ಕೆ ಪೇಂಟಿಂಗ್‌ ಮಾಡುತ್ತಿದ್ದ ವೇಳೆ ಯುವಕ ಜಗದೀಶ್‌ ಬಿದ್ದು ಸಾವನ್ನಪ್ಪಿದ್ದಾನೆ. ಕಟ್ಟಡಕ್ಕೆ ಪೇಂಟಿಂಗ್‌ ಮಾಡುತ್ತಿದ್ದ ವೇಳೆ ಹಗ್ಗ ತುಂಡಾಗಿ 3ನೇ ಮಹಡಿಯಿಂದ ಜಗದೀಶ್‌ ಬಿದ್ದಿದ್ದಾನೆ. ಯುವಕನಿಗೆ ತೀವ್ರ ರಕ್ತಸ್ರಾವವಾಗಿದ್ದು, ಆತನನ್ನು ಹಾಸನ ಜಿಲ್ಲೆಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಯುವಕ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.

ಯಾವುದೇ ಸುರಕ್ಷತೆಯಿಲ್ಲದೇ ಕಟ್ಟಡ ಏರಿ ಕೆಲಸ ಮಾಡುತ್ತಿದ್ದ ಸಂದರ್ಭ ಹಗ್ಗ ತುಂಡಾಗಿ ದುರ್ಘಟನೆ ಸಂಭವಿಸಿದೆ. ಘಟನೆ ಬಗ್ಗೆ ಚಿಕ್ಕಮಗಳೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!