Sunday, June 29, 2025
spot_imgspot_img
spot_imgspot_img

ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವು

- Advertisement -
- Advertisement -

ಸೊಂಟಕ್ಕೆ ಕಟ್ಟಿದ್ದ ಬೆಲ್ಟ್ ಕಟ್ ಆಗಿ ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ನವಭಾಗ್ ರಸ್ತೆಯ ಫಿಶ್ ಟನಲ್ ಎಕ್ಸ್ಪೋದಲ್ಲಿ ನಡೆದಿದೆ.

ಮೃತ ಯುವತಿಯನ್ನು ನಿಖಿತಾ ಎಂದು ಗುರುತಿಸಲಾಗಿದೆ.

ರೇಂಜರ್ ಸ್ವಿಂಗ್​ನಲ್ಲಿ ಕುಳಿತಾಗಲೇ ನಿಖಿತಾಗೆ ಹಾಕಿದ್ದ ಬೆಲ್ಟ್ ಸರಿಯಾಗಿದೆಯಾ ಎಂದು ಆಕೆಯ ತಾಯಿ ಆಪರೇಟರ್​ಗೆ ಪ್ರಶ್ನಿಸಿದ್ದಳು. ಅದಕ್ಕೆ ಆತ ಎಲ್ಲಾ ಓಕೆ ಎಂದಿದ್ದ. ಅಲ್ಲದೇ ಸ್ವಲ್ಪ ಸಮಯದ ಬಳಿಕ ಸಾಕು ನಿಲ್ಲಿಸಿ ನಿಲ್ಲಿಸಿ ಎಂದು ಆಪರೇಟರ್​ ಬಳಿ ನಿಖಿತಾ ತಾಯಿ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ, ಆಪರೇಟರ್ ಅದ್ಯಾವುದನ್ನೂ ಕೇಳಿಸಿಕೊಳ್ಳದೇ ಸುಮ್ಮನಾಗಿದ್ದಾನೆ.

ಇದೇ ವೇಳೆ ನಿಖಿತಾಗೆ ಹಾಕಿದ್ದ ಸೇಪ್ಟಿ ಬೆಲ್ಟ್ ಸಡಿಲಾಗಿ ಆಕೆ ಮೇಲಿಂದ ಕೆಳಗೆ ಬಿದ್ದಿದ್ದಾಳೆ. ಈ ಹಿನ್ನೆಲೆಯಲ್ಲಿ ತಲೆ ಹಾಗೂ ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ನಿಖಿತಾ ಸಾವನ್ನಪ್ಪಿದ್ದಾಳೆ. ಇದಕ್ಕೆ ಫೀಶ್ ಟನಲ್ ಎಕ್ಪೋ ಮ್ಯಾನೇಜ್ಮೆಂಟ್ ನಿರ್ಲಕ್ಷ್ಯ ಎಂದು ಆರೋಪಿಸಲಾಗಿದೆ.

ಆಪರೇಟರ್ ರಮೇಶ ರಾಯ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮ್ಯಾನೇಜರ್ ರಮೇಶ ಬಾಬು ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!